ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಫೋಟೋಗಳು ಕತೆ ಹೇಳುತ್ತವೆ. ಅದರಲ್ಲೂ ಸಿನಿಮಾಗೆ ಸಂಬಂಧಿಸಿದ ಫೋಟೋಗಳು ತಮ್ಮೊಳಗೆ ಅನೇಕ ಕತೆ-ವಿಶೇಷಗಳನ್ನು ಬಚ್ಚಿಟ್ಟುಕೊಂಡಿರುತ್ತವೆ. ಅವುಗಳನ್ನು ದಾಖಲಿಸುವ ಮತ್ತು ಫೋಟೋಗಳ ಹಿಂದಿನ ಕತೆ ಹೇಳುವ ಒಂದು ಪ್ರಯತ್ನ.

ಹುಡುಕಿಕೊಂಡು ಮನೆಗೇ ಬಂದಿದ್ದರು ಅಂಬರೀಶ್!

(ಫೋಟೊ-ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕ) 1978ರ ಸಂಕ್ರಾಂತಿ ಹಬ್ಬದ ದಿನ ಅಪರೂಪಕ್ಕೆ ನಾನು ಮನೆಯಲ್ಲೇ ಇದ್ದೆ. ಯಾವುದೇ ಶೂಟಿಂಗ್ ಇರಲಿಲ್ಲ. ಅಂದು ನಮ್ಮ ‘ಪ್ರಗತಿ’ ಸ್ಟುಡಿಯೋ ರಜೆ ಮಾಡಿದ್ದೆವು. ಮನೆಯಲ್ಲಿ ಕುಟುಂಬದವರೊಂದಿಗೆ ಹಬ್ಬದ ಸಂಭ್ರಮದಲ್ಲಿದ್ದೆ. ಆ ಸಮಯದಲ್ಲಿ ಶೂಟಿಂಗ್‌ಗಳಿಗೆ

ಇದು ನಟಿ ಆರತಿ ಕ್ಲಿಕ್ಕಿಸಿದ ಫೋಟೊ!

ತಮ್ಮ ಕ್ಯಾಮರಾಗಳ ಮೂಲಕ ಎಲ್ಲರ ನೆನಪುಗಳನ್ನು ಹಿಡಿದಿಡುವ ಛಾಯಾಗ್ರಾಹಕರು ತಮಗಾಗಿ ಫೋಟೋ ತೆಗೆದಿಟ್ಟುಕೊಳ್ಳುವುದು ತೀರಾ ಅಪರೂಪ. ಅದರಲ್ಲೂ ಅಂದಿನ ದುಬಾರಿ ಕಾಲದಲ್ಲಿ ಆ ರೀತಿ ಯೋಚಿಸುತ್ತಲೂ ಇರಲಿಲ್ಲ. ‘ವಿನಾಃಕಾರಣ ಒಂದು ನೆಗೆಟಿವ್‌ ವೇಸ್ಟ್ ಆಗುತ್ತೆ’ ಎಂದು ಸ್ಥಿರಚಿತ್ರ ಛಾಯಾಗ್ರಾಹಕರು ಲೆಕ್ಕಾಚಾರ ಹಾಕುತ್ತಿದ್ದರು.

ಮೇಕಪ್‌ಮ್ಯಾನ್ ರಾಜಕುಮಾರ್!

ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು ಸುಧಾರಾಣಿ ಪ್ರಮುಖ ಪಾತ್ರಧಾರಿಗಳು. ಆ ದಿನಗಳಲ್ಲೊಮ್ಮೆ

18ರ ಹರೆಯದಲ್ಲೇ ಚೀಫ್ ಮೇಕಪ್‌ಮ್ಯಾನ್‌!

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಸಾಕ್ಷಾತ್ಕಾರ’ ಚಿತ್ರಕ್ಕೆ ಎಂ.ಎಸ್‌.ಸುಬ್ಬಣ್ಣ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಎರಡು ಶೆಡ್ಯೂಲ್ ಚಿತ್ರೀಕರಣ ಆಗಿತ್ತು. ಮೂರನೇ ಶೆಡ್ಯೂಲ್ ಶುರುವಾಗುವ ಹೊತ್ತಿನಲ್ಲಿ

ಪಿಬಿಎಸ್ ಸಂಗೀತ ಸಂಯೋಜನೆಯ ‘ಹೆಳವನಕಟ್ಟೆ ಗಿರಿಯಮ್ಮ’

ದಕ್ಷಿಣ ಭಾರತದ ಜನಪ್ರಿಯ ಗಾಯಕ ಪಿ.ಬಿ.ಶ್ರಿನಿವಾಸ್ ನೆನಪಿನ ಸುಂದರ ಫೋಟೋ ಇದು. ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ ರಾಜಕುಮಾರ್

ಹುಲಿ ಬಂತು ಹುಲಿ – ತೆರೆಯ ಹಿಂದಿನ ಕತೆಗಳು

ಖಾರಾಪುರ ಕಾಡಿನಲ್ಲಿ ಹುಲಿ ಚಂದ್ರಶೇಖರ್‌ ಚೊಚ್ಚಲ ನಿರ್ದೇಶನದ ‘ಹುಲಿ ಬಂತು ಹುಲಿ’ ಸಿನಿಮಾ ಮುಹೂರ್ತದ ಸಂದರ್ಭ. 1975ರ ಅಕ್ಟೋಬರ್‌ ತಿಂಗಳು. ಸಾಹಿತಿ ಅನಂತಮೂರ್ತಿ ಅವರು ಕ್ಯಾಮರಾಗೆ ಚಾಲನೆ

ಹಾಡಿನ ಪುಸ್ತಕ

ಹೆಚ್ಚಿನ ಸಂಖ್ಯೆಯ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಲ್ಲದ ಆಗಿನ ಕಾಲದಲ್ಲಿ ಸಿನಿಮಾ ಪ್ರಚಾರಕ್ಕೆ ವಿವಿಧ ತಂತ್ರಗಳ ಮೊರೆಹೋಗಬೇಕಿತ್ತು. ಇಂತಹ ಹಾಡಿನ ಪುಸ್ತಕಗಳು ಕೂಡ ಸಿನಿಮಾದ ಪ್ರಚಾರಕ್ಕೆ ತಕ್ಕಮಟ್ಟಿಗೆ

‘ಬಿಳಿ ಹೆಂಡ್ತಿ’ ಮಾರ್ಗರೆಟ್

ಅಮೆರಿಕ ಮೂಲದ ಮಾರ್ಗರೆಟ್ ಥಾಮ್ಸನ್ ‘ಬಿಳಿ ಹೆಂಡ್ತಿ’ ಚಿತ್ರಕ್ಕೆ ಆಯ್ಕೆಯಾದದ್ದು ಆಕಸ್ಮಿಕ. ಹದಿನೆಂಟರ ಹರೆಯದ ಮಾರ್ಗರೆಟ್ ಆಗ ‘ಭಾರತದ ಗ್ರಾಮೀಣ ಬದುಕು’ ವಿಷಯದಲ್ಲಿ ಇಂಟರ್ನ್‌ಶಿಪ್‌ ಮಾಡಲು ಭಾರತಕ್ಕೆ