ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಸಾಧನಾ ನೆನಪು

ಹಿಂದಿ ಚಿತ್ರರಂಗದ 60ರ ದಶಕದ ಜನಪ್ರಿಯ ನಾಯಕನಟಿ ಸಾಧನಾ. ‘ಶ್ರೀ 420’ (1955) ಚಿತ್ರದ ಪುಟ್ಟ ಪಾತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಅವರಿಗೆ ‘ಲವ್ ಇನ್ ಶಿಮ್ಲಾ’ (1960) ಚಿತ್ರ ವೃತ್ತಿಬದುಕಿಗೆ ದೊಡ್ಡ ತಿರುವಾಯ್ತು. ಮುಂದೆ ಪರಾಖ್‌, ಅಸ್ಲೀ-ನಕ್ಲೀ, ಹಮ್ ದೋನೋ, ಏಕ್ ಮುಸಾಫಿರ್‌ ಏಕ್ ಹಸೀನಾ, ರಾಜ್‌ಕುಮಾರ್, ಆರ್ಝೂ, ವೊಹ್ ಕೌನ್‌‌ ಥೀ?, ಮೇರೆ ಸಾಯಾ, ವಕ್ತ್‌… ಸಾಲು ಸಾಲು ಚಿತ್ರಗಳ ವೈವಿಧ್ಯಮಯ ಪಾತ್ರಗಳ ಮೂಲಕ ಸಿನಿಪ್ರೇಮಿಗಳ ಮನಸೂರೆಗೊಂಡರು. ‘ಲವ್‌ ಇನ್‌ ಶಿಮ್ಲಾ’ ಚಿತ್ರದಲ್ಲಿನ ಅವರ ಹೇರ್‌ಸ್ಟೈಲ್‌ ‘ಸಾಧನಾ ಕಟ್‌’ ಎಂದೇ ಹೆಸರಾಗಿ ಬಹು ಜನಪ್ರಿಯವಾಗಿತ್ತು. ಇಂದು ನಟಿ ಸಾಧನಾ (02/09/1941 – 25/12/2015) ಅವರ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು