ಪಿ.ಪುಲ್ಲಯ್ಯ ನಿರ್ದೇಶನದ ‘ಇಲ್ಲರಮೆ ನಲ್ಲರಮ್’ (1958) ತಮಿಳು ಚಿತ್ರದಲ್ಲಿ ಅಂಜಲಿದೇವಿ ಮತ್ತು ಜೆಮಿನಿ ಗಣೇಶನ್. ರಂಗಭೂಮಿ ಹಿನ್ನೆಲೆಯ ಅಂಜಲಿದೇವಿ ‘ಗೊಲ್ಲಭಾಮ’ (1947) ತೆಲುಗು ಚಿತ್ರದ ಮೂಲಕ ನಾಯಕನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದರು. ಐದು ದಶಕಗಳ ನಟನಾ ಬದುಕಿನಲ್ಲಿ ನಾಯಕನಟಿ, ಪೋಷಕ ಕಲಾವಿದೆಯಾಗಿ ಅಂಜಲಿದೇವಿ ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳ 320ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅತ್ಯುತ್ತಮ ನಟನೆಗೆ ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿರುವ ಅಂಜಲಿದೇವಿ ಅವರಿಗೆ ‘ಲವ ಕುಶ’ ಚಿತ್ರದ ಉತ್ತಮ ನಟನೆಗೆ ರಾಷ್ಟ್ರಪತಿ ಪದಕ ಸಂದಿದೆ. ಅವರು 25ಕ್ಕೂ ಹೆಚ್ಚು ತೆಲುಗು ಮತ್ತು ತಮಿಳು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇಂದು ಅಂಜಲಿದೇವಿ (24/08/1927 – 13/01/2014) ಜನ್ಮದಿನ. (Photo Courtesy: The News Minute)

ನಟಿ ಅಂಜಲಿದೇವಿ ನೆನಪು
- ಬಹುಭಾಷಾ ಸಿನಿಮಾ
Share this post