ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಯಿರಾ ಬಾನು – 77

ಹಿಂದಿ ಸಿನಿಮಾದ ಜನಪ್ರಿಯ ತಾರೆಯರಾದ ದಿಲೀಪ್ ಕುಮಾರ್‌ ಮತ್ತು ಸಾಯಿರಾ ಬಾನು ಮದುವೆ ಸಂದರ್ಭ. ಸಾಯಿರಾ ಬಾನು ಅವರ ತಾಯಿ ನಸೀಮಾ ಬಾನು ಫೋಟೊದಲ್ಲಿದ್ದಾರೆ. ಹಿಂದಿ ಸಿನಿಮಾದ 60, 70ರ ದಶಕಗಳ ಜನಪ್ರಿಯ ನಾಯಕನಟಿ ಸಾಯಿರಾ ಬಾನು. ‘ಜಂಗ್ಲೀ’ (1961) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ಅಂದಿನ ಮುಂಚೂಣಿ ನಾಯಕನಟರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಬ್ಲಫ್ ಮಾಸ್ಟರ್, ಆಯೇ ಮಿಲನ್ ಕಿ ಬೇಲಾ, ಝುಕ್ ಗಯಾ ಆಸ್ಮಾನ್‌, ಪಡೋಸನ್‌, ಹೇರಾ ಫೇರಿ, ಭೈರಾಗ್‌… ಅವರ ಕೆಲವು ಜನಪ್ರಿಯ ಚಿತ್ರಗಳು. ಇಂದು (ಆಗಸ್ಟ್‌ 23) ಅವರ 77ನೇ ಜನ್ಮದಿನ. (Photo: Film History Pics)

Share this post