ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗಾಯಕಿ ಚಿತ್ರಾ – 58

‘ಪೂವೆ ಪೂಚೂಡ ವಾ’ (1985) ತಮಿಳು ಸಿನಿಮಾದ ಹಾಡಿನ ಧ್ವನಿಮುದ್ರಣದಲ್ಲಿ ಸಂಗೀತ ಸಂಯೋಜಕ ಇಳಯರಾಜ, ಗಾಯಕ ಯೇಸುದಾಸ್‌, ಗಾಯಕಿ ಕೆ.ಎಸ್‌.ಚಿತ್ರಾ ಮತ್ತು ಚಿತ್ರದ ನಿರ್ದೇಶಕ ಫಾಝಿಲ್‌. ದಕ್ಷಿಣ ಭಾರತದ ಹೆಸರಾಂತ ಗಾಯಕಿ ಚಿತ್ರಾ ಅವರಿಗೆ ಇಂದು (ಜುಲೈ 27) 58ನೇ ಹುಟ್ಟುಹಬ್ಬ. ವಿವಿಧ ಭಾಷೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಚಿತ್ರಾ. ಪದ್ಮಭೂಷಣ ಪುರಸ್ಕೃತ ಗಾಯಕಿ ಆರು ಬಾರಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ 1400ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದು, ಅತ್ಯುತ್ತಮ ಗಾಯನಕ್ಕಾಗಿ ಮೂರು ಬಾರಿ ಕರ್ನಾಟಕ ರಾಜ್ಯಪ್ರಶಸ್ತಿ ಪಡೆದಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು