ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎ.ವಿ.ಮೇಯಪ್ಪನ್ ನೆನಪು

ತಮಿಳು ಚಿತ್ರರಂಗದ ಮೇರು ನಟ ಎಂಜಿಆರ್ ಅವರೊಂದಿಗೆ ಎ.ವಿ.ಮೇಯಪ್ಪನ್‌. ದಕ್ಷಿಣ ಭಾರತ ಸಿನಿಮಾದ ಪ್ರಮುಖ ಚಿತ್ರಕರ್ಮಿ ಎ.ವಿ.ಮೇಯಪ್ಪನ್‌. ಚಿತ್ರನಿರ್ಮಾಪಕ, ನಿರ್ದೇಶಕರಾದ ಅವರು ಮದರಾಸಿನಲ್ಲಿ ‘ಎವಿಎಂ’ ಸ್ಟುಡಿಯೋ ಕಟ್ಟಿ ದಕ್ಷಿಣ ಭಾರತ ಚಿತ್ರರಂಗದ ಬೆಳವಣಿಗೆಗೆ ಇಂಬು ನೀಡಿದವರು. 1935ರಲ್ಲಿ ಚೊಚ್ಚಲ ಸಿನಿಮಾ (ಅಲ್ಲಿ ಅರ್ಜುನ – ತಮಿಳು) ನಿರ್ಮಿಸಿದ ಮೇಯಪ್ಪನ್‌ ಅವರು ಸ್ಟುಡಿಯೋ ಆರಂಭಿಸಿದ್ದು 1945ರಲ್ಲಿ. ದಕ್ಷಿಣ ಭಾರತದ ಪ್ರಮುಖ ನಾಯಕನಟರ ಆರಂಭದ ಬಹುಪಾಲು ಸಿನಿಮಾಗಳು ಚಿತ್ರಣಗೊಂಡಿರುವುದು ಇಲ್ಲಿಯೇ. ಎವಿಎಂ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ವಿವಿಧ ಭಾಷೆಗಳ 270ಕ್ಕೂ ಹೆಚ್ಚ ಸಿನಿಮಾಗಳು ನಿರ್ಮಾಣಗೊಂಡಿವೆ. ಪ್ರಸ್ತುತ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಇಂದಿಗೂ ಸ್ಟುಡಿಯೋ ಸಕ್ರಿಯವಾಗಿದೆ. ಇಂದು ಮೇಯಪ್ಪನ್ (28/07/1907 – 12/08/1979) ಅವರ ಸಂಸ್ಮರಣಾ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು