ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿನಿದಿಗ್ಗಜರ ಸಂಗಮ – ‘ನಾಸ್ಟಾಲ್ಜಿಯಾ’

Share this post
1977ರಲ್ಲಿ ಬೆಂಗಳೂರಿನಲ್ಲಿ ನಡೆದ ಅಪರೂಪದ ಸಿನಿಮಾ ಕಾರ್ಯಕ್ರಮ ‘ನಾಸ್ಟಾಲ್ಜಿಯಾ’. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಕನ್ನಡ ಸಿನಿಮಾ ಪತ್ರಕರ್ತರು ಜೊತೆಗೂಡಿ ಆಯೋಜಿಸಿದ್ದ ಕಾರ್ಯಕ್ರಮ. 50, 60, 70ರ ದಶಕಗಳಲ್ಲಿ ಹಿಂದಿ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಧನೆ ಮಾಡಿದ ತಾರೆಯರನ್ನು ಈ ಸಮಾರಂಭದಲ್ಲಿ ಗೌರವಿಸಲಾಯಿತು. ವೆಸ್ಟ್ ಎಂಡ್ ಹೋಟೆಲ್‍ನಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಕಲಾವಿದರನ್ನು ವಿಂಟೇಜ್ ಕಾರುಗಳಲ್ಲಿ ಮೆರವಣಿಗೆಯೊಂದಿಗೆ ಕರೆತಂದದ್ದು ವಿಶೇಷ. ಈ ವಿಶಿಷ್ಟ ಸಮಾರಂಭಕ್ಕೆ ಸಾಕ್ಷಿಯಾದ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ತಾವು ಸೆರೆಹಿಡಿದ ಫೋಟೋಗಳೊಂದಿಗೆ ಸಂದರ್ಭವನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.