ವರನಟ ರಾಜಕುಮಾರ್ ತಮ್ಮ ಸರಳ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಪ್ರಿಯರಾಗಿದ್ದವರು. ಕ್ಯಾಮರಾ ಎದುರು ಹೊರತುಪಡಿಸಿ ಉಳಿದಂತೆ ಅವರು ತೊಡುತ್ತಿದ್ದುದು ಬಿಳಿ ಷರ್ಟ್, ಬಿಳಿ ಪಂಚೆ. ಹಾಗಾಗಿ ರಾಜ್ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಅವರು ನೆನಪಾಗುವುದು ಶ್ವೇತ ವಸ್ತ್ರಧಾರಿಯಾಗಿಯೇ. ಹೀಗಿರುವಾಗ ಸಂದರ್ಶನದ ಸಂದರ್ಭವೊಂದರಲ್ಲಿ ಡಿಫರೆಂಟ್ ಫೋಟೋಗಳಿಗೆಂದು ಅವರಿಗೆ ಕಲರ್ ಷರ್ಟ್ ಹಾಕಿಸಿದ ಪ್ರಸಂಗವೊಂದನ್ನು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರಿಲ್ಲಿ ಸ್ಮರಿಸಿಕೊಂಡಿದ್ದಾರೆ.