ಜೋಗ್ ಫಾಲ್ಸ್ ಬಳಿ ಸಿದ್ದಲಿಂಗಯ್ಯ ನಿರ್ದೇಶನದ ‘ಬಿಳಿಗಿರಿಯ ಬನದಲ್ಲಿ’ (1980) ಸಿನಿಮಾ ಚಿತ್ರೀಕರಣದ ಸಂದರ್ಭ. ನಟ ಜೈಜಗದೀಶ್ ಅವರೊಂದಿಗೆ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಇದ್ದಾರೆ. ಕನ್ನಡ ಚಿತ್ರರಂಗದ ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ‘ಪ್ರಗತಿ’ ಸ್ಟುಡಿಯೋದ ಕೊಡುಗೆ ಮಹತ್ವದ್ದು. ‘ಪ್ರಗತಿ’ಯ ಅಶ್ವತ್ಥ ನಾರಾಯಣ ಅವರು 300ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುವ ಸಹಸ್ರಾರು ಫೋಟೋಗಳು ಅವರಲ್ಲಿವೆ. ಇಂದು (ಮಾರ್ಚ್ 30) ಅಶ್ವತ್ಥರಿಗೆ 75ನೇ ಹುಟ್ಟುಹಬ್ಬ.

ಪ್ರಗತಿ ಅಶ್ವತ್ಥ ನಾರಾಯಣ – 75
- ಕನ್ನಡ ಸಿನಿಮಾ
Share this post