
ನಾರಾಯಣಸ್ವಾಮಿ
ಸಿನಿಮಾ ಬರಹಗಾರ
ಒಂದೇ ಫ್ರೇಂನಲ್ಲಿ ಅರ್ಧ ಭಾಗ 24 F.P.S. ಉಳಿದರ್ಧ ಭಾಗದಲ್ಲಿ 48 F.P.S.ನಲ್ಲಿ ಅದೂ ಹೊರಾಂಗಣದಲ್ಲಿ (Day lightನಲ್ಲೇ) Mask shot ಚಿತ್ರೀಕರಣ (‘ನಾಗರಹಾವು’ ಸಿನಿಮಾ) ಎಂಬುದು ಅಂದಿನ ಸೀಮಿತ ತಂತ್ರಜ್ಞಾನ ಮಾತ್ರ ಲಭ್ಯವಿದ್ದ ಕಾಲದಲ್ಲಿ ಅಚ್ಚರಿಯೇ ಸರಿ.
ನಿನ್ನೆಯ ಸೆಲ್ಯೂಲಾಯ್ಡ್ ಫಿಲಂನಲ್ಲಿ ಚಿತ್ರೀಕರಿಸಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲ್ಪಡುತಿದ್ದ ಚಲನಚಿತ್ರಗಳ ‘ಚಲನೆ ಮತ್ತು ಶಬ್ದ’ ಸ್ವಾಭಾವಿಕವಾಗಿ ಇರಬೇಕಾದರೆ ಕ್ಯಾಮೆರಾ ಮತ್ತು ಪ್ರೊಜೆಕ್ಟರ್‌ನ ವೇಗ 24 F.P.S ಎಂಬುದು Universal standard ಆಗಿತ್ತು. ಸ್ಪೆಷಲ್ ಎಫೆಕ್ಟ್‌ಗಾಗಿ ಕ್ಯಾಮೆರಾದ ವೇಗವನ್ನು ಮಾತ್ರ (ಶಬ್ದ ಸಾಧ್ಯವಿರಲಿಲ್ಲ) 24 F.P.Sಗಿಂತ ಎರಡು ಪಟ್ಟು, ಮೂರು ಪಟ್ಟು ವೇಗವಾಗಿ (High speed) ಚಿತ್ರೀಕರಿಸಿ ಪ್ರೊಜೆಕ್ಟರ್ ನಲ್ಲಿ ಪ್ರದರ್ಶಿಸಿದಾಗ ‘ಸ್ಲೋಮೋಷನ್’ ಎಫೆಕ್ಟ್ ದೊರೆಯುತ್ತಿತ್ತು! (ಕ್ಯಾಮೆರಾಗೆ ಪ್ರತ್ಯೇಕ ಮೋಟಾರ್ ಅಳವಡಿಸಬೇಕಿತ್ತು).
ಒಂದು ವೇಳೆ 24 F.P.Sಗಿಂತ ಕಡಿಮೆ ವೇಗದಲ್ಲಿ ಚಿತ್ರೀಕರಿಸಿದರೆ ಅದು ‘ಫಾಸ್ಟ್ ಮೋಷನ್’ ಎಫೆಕ್ಟ್ ನೀಡುತ್ತಿತ್ತು. (ಮೂಕಿ ಚಿತ್ರಗಳ ಕಾಲದ ಚಾರ್ಲಿ ಚಾಪ್ಲಿನ್ ಚಿತ್ರಗಳ ಚಲನೆಯ ವೇಗವನ್ನು ಗಮನಿಸಬಹುದು). ಆದರೆ, ಒಂದೇ ಫ್ರೇಂನಲ್ಲಿ ಅರ್ಧ ಭಾಗ 24 F.P.S ಉಳಿದರ್ಧ ಭಾಗದಲ್ಲಿ 48 F.P.Sನಲ್ಲಿ ಅದೂ ಹೊರಾಂಗಣದಲ್ಲಿ (Day lightನಲ್ಲೇ) Mask shot ಚಿತ್ರೀಕರಣ ಎಂಬುದು ಅಂದಿನ ಸೀಮಿತ ತಂತ್ರಜ್ಞಾನ ಮಾತ್ರ ಲಭ್ಯವಿದ್ದ ಕಾಲದಲ್ಲಿ ಅಚ್ಚರಿಯೇ ಸರಿ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಛಾಯಾಗ್ರಾಹಕ ಚಿಟ್ಟಿಬಾಬು ‘ನಾಗರಹಾವು’ ಚಿತ್ರದ ‘ಬಾರೇ ಬಾರೇ’ ಹಾಡಿನಲ್ಲಿ ಇದನ್ನು ಸಾಧ್ಯವಾಗಿಸಿದ್ದಾರೆ. ಅವರ ತಾಂತ್ರಿಕ ಪರಿಣತಿ, ಪ್ರಯೋಗ ಶ್ಲಾಘನೀಯವಾದುದು.
