ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತಂತ್ರಜ್ಞಾನದ ಮಿತಿ ಮತ್ತು ನೆರಳು-ಬೆಳಕಿನ ಸಂಯೋಜನೆ

Share this post
ಪ್ರಗತಿ ಅಶ್ವತ್ಥ ನಾರಾಯಣ
ಸ್ಥಿರಚಿತ್ರ ಛಾಯಾಗ್ರಾಹಕ

Film Developer ಎಂದು ಕರೆಯುತ್ತಿದ್ದ  solution ಅನ್ನು ತಾವೇ ತಮ್ಮ ಸ್ಟುಡಿಯೋಗಳಲ್ಲಿ ತಯಾರು ಮಾಡಿಕೊಳ್ಳುತ್ತಿದ್ದರು. ಐದಾರು ಬಗೆಯ Chemical ಗಳನ್ನು ನಿಗಧಿತ ಪ್ರಮಾಣದಲ್ಲಿ ತೂಕ ಮಾಡಿ ‌ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿದಾಗ Film Developer ಸಿದ್ದವಾಗುತ್ತಿತ್ತು.

ಇಂದಿಗೆ ಹೋಲಿಸಿದರೆ ತಂತ್ರಜ್ಞಾನ ಕಡಿಮೆಯಿದ್ದ ಅಂದಿನ ದಿನಗಳಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕರು ತಮ್ಮ ವೃತ್ತಿ ಕೌಶಲ್ಯ ಪ್ರದರ್ಶಿಸಲು ಸಾಕಷ್ಟು ಪ್ರಯಾಸ ಪಡಬೇಕಿತ್ತು. ಫಿಲಂ ಬಳಸಿ ಪೋಟೋ ತೆಗೆಯುತ್ತಿದ್ದ ಕಾಲ ಅದು. Fixed Lens ಒಂದರಲ್ಲೇ ಫೋಟೊ ತೆಗೆಯಬೇಕಾಗಿತ್ತು. Zoom Lens ಬಂದಿರಲಿಲ್ಲ. Dark Roomನಲ್ಲಿ ಫಿಲಂ ಸಂಸ್ಕರಣೆ ಮಾಡಿದಾಗ ನೆಗಟಿವ್ ಬರುತ್ತಿದ್ದವು. ಈ ಸಂಸ್ಕರಣೆಯ ವಿಧಾನದಲ್ಲೂ ಸಾಕಷ್ಟು ವಿಧಗಳಿದ್ದವು. ಪ್ರತಿಯೊಬ್ಬ ಛಾಯಾಗ್ರಾಹಕರು ತಮ್ಮದೇ ಆದ ತಂತ್ರ, ವಿಧಾನಗಳನ್ನು ಅಳವಡಿಸಿಕೊಂಡಿದ್ದರು. ಛಾಯಾಗ್ರಾಹಕನ ಅನುಭವ, ಪರಿಣಿತಿಯೂ ಇಲ್ಲಿ ಮಾನದಂಡವಾಗಿತ್ತು. Film Developer ಎಂದು ಕರೆಯುತ್ತಿದ್ದ  solution ಅನ್ನು ತಾವೇ ತಮ್ಮ ಸ್ಟುಡಿಯೋಗಳಲ್ಲಿ ತಯಾರು ಮಾಡಿಕೊಳ್ಳುತ್ತಿದ್ದರು. ಐದಾರು ಬಗೆಯ Chemical ಗಳನ್ನು ನಿಗಧಿತ ಪ್ರಮಾಣದಲ್ಲಿ ತೂಕ ಮಾಡಿ, ಸೂಕ್ತ ಕ್ರಮಾಂಕದಲ್ಲಿ ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿದಾಗ Film Developer ಸಿದ್ದವಾಗುತ್ತಿತ್ತು.

ಫಿಲಂ ಸಂಸ್ಕರಣೆ ಪೂರ್ಣ ಕತ್ತಲೆಯಲ್ಲಿ ನಿರ್ಧಿಷ್ಟ ತಾಪಮಾನ, ನಿರ್ಧಿಷ್ಟ ಸಮಯದಲ್ಲಿ ಮಾಡಿದಾಗ ಮಾತ್ರ ಗುಣಮಟ್ಟದ ನೆಗಟಿವ್ ಸಿದ್ದವಾಗುತ್ತಿದ್ದವು. ಈ ನೆಗಟಿವ್ ಗಳಿಂದ ನಂತರ ಪಾಸಿಟಿವ್ ಅಂದರೆ ಪೋಟೋಗಳಾಗಿ ಪರಿವರ್ತಿಸುವ ಕೆಲಸ (ಅದನ್ನು ಇನ್ನೊಮ್ಮೆ ತಿಳಿಯೋಣ). ಇಲ್ಲಿ ನಾನು ಎಂಟು ಫೋಟೋಗಳನ್ನು ಹಾಕಿರುವೆ. ನಾನು ಸೆರೆಹಿಡಿದ ನಾಲ್ಕು ಫೋಟೋಗಳ ಜೊತೆ ಇತರೆ ಛಾಯಾಗ್ರಾಹಕರ ನಾಲ್ಕು ಫೋಟೋಗಳಿವೆ. ಸುಮಾರು 45ರಿಂದ 60 ವರ್ಷಗಳಷ್ಟು ಹಳೆಯ ಫೋಟೋಗಳು. Close up ಫೋಟೋಗಳಲ್ಲಿ ಆಗ ಛಾಯಾಗ್ರಾಹಕರು ಪಾಲಿಸುತ್ತಿದ್ದ ನೆರಳು ಬೆಳಕಿನ ಸಂಯೋಜನೆ ಗಮನಿಸಿ. ಪೋಟೋ ಅಂದವಾಗಿ ಕಾಣಲು ಕಲಾವಿದರ Expressions ಸಹ ಸಹಕರಿಸಿದೆ. ಮೂಲ ನೆಗೆಟಿವ್‌ಗಳನ್ನು Negetive scanner ನಿಂದ Scan ಮಾಡಿರುವ ಫೋಟೋಗಳಿವು.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ