ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಸಿನ್ಹಳ ಭಾಷಾ ಸಿನಿಮಾಗಳಿಗೆ ಎಸ್.ಜಾನಕಿ ಹಾಡಿದ ಮೊದಲ ಹಾಡುಗಳು ಇಲ್ಲಿವೆ. ಇವೆಲ್ಲವೂ 1957ರಲ್ಲಿ ಧ್ವನಿಮುದ್ರಣಗೊಂಡ ಹಾಡುಗಳು. ಜಾನಕಮ್ಮ ಮೊದಲ ಹಾಡು ಹಾಡಿದ್ದು ‘ವಿಧಿಯಿನ್ ವಿಳಯಟ್ಟು’ ತಮಿಳು ಚಿತ್ರಕ್ಕೆ. ಟಿ.ಛಲಪತಿ ರಾವ್ ಸಂಗೀತ ಸಂಯೋಜಕರು. ಈ ಸಿನಿಮಾ ತೆರೆಕಾಣಲಿಲ್ಲ.
ಕನ್ನಡ | ಭಲೇ ಭಲೇ ಗಾರುಡಿ | ಸಿನಿಮಾ: ಶ್ರೀಕೃಷ್ಣಗಾರಡಿ | ಪೆಂಡ್ಯಾಲ ಸಂಗೀತ ಸಂಯೋಜನೆಯಲ್ಲಿ ಧ್ವನಿಮುದ್ರಣಗೊಂಡ ಮೊದಲ ಕನ್ನಡ ಹಾಡಿದು. ಕೆಲವೇ ದಿನಗಳಲ್ಲಿ ಅವರು ‘ರಾಯರ ಸೊಸೆ’ ಸಿನಿಮಾದ ಶ್ಲೋಕ ಹಾಡಿದ್ದರು. ಲತಾ ಮಂಗೇಶ್ಕರ್ ಹಾಡಿದ್ದ ಮರಾಠಿ ಭಾವಗೀತೆಯ ಟ್ಯೂನ್ ಆಧರಿಸಿ ಕನ್ನಡ ಶ್ಲೋಕ ರೂಪುಗೊಂಡಿತ್ತು. ಬಿಡುಗಡೆಯಾದ ಮೊದಲ ಹಾಡು ಇದೇ ಆಯ್ತು.
ತಮಿಳು | ಕಣ್ಣುಕ್ಕು ನೀರ | ಸಿನಿಮಾ: ಮಗಲಥ ನಟ್ಟು ಮೇರಿ | ಈ ಹಾಡಿಗೆ ಆರ್.ಪಾರ್ಥಸಾರತಿ ಸಂಗೀತ ಸಂಯೋಜನೆಯಿದೆ. ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಈ ಡ್ಯೂಯೆಟ್ ಗೀತೆಗೆ ದನಿಯಾಗಿದ್ದಾರೆ ಜಾನಕಿ.
ಮಲಯಾಳಂ | ಇರುಳ್ ಮೂಡುಕಾಯೋ ಎನ್ ವಾಝಿಲ್ | ಸಿನಿಮಾ: ಮಿನ್ನುನ್ನಾಥೆಲಾಮ್ ಪೊಣ್ಣಲ್ಲ | ಎಸ್.ಎನ್.ರಂಗನಾಥನ್ ಸಂಗೀತ ಸಂಯೋಜನೆಯ ಹಾಡಿದು. ‘ನಾಗಿನ್’ ಹಿಂದಿ ಚಿತ್ರಕ್ಕಾಗಿ ಹೇಮಂತ್ ಕುಮಾರ್ ಸಂಗೀತ ಸಂಯೋಜಿಸಿದ್ದ, ಲತಾ ಮಂಗೇಶ್ಕರ್ ಹಾಡಿದ್ದ ಹಾಡಿನ ಟ್ಯೂನ್ ಇಲ್ಲಿ ಬಳಕೆಯಾಗಿತ್ತು.
ತೆಲುಗು | ಗೀತೆ: ನೀ ಆಸಾ ಅದಿಯಾಸಾ | ಸಿನಿಮಾ: ಎಂಎಲ್‌ಎ | ಮೊದಲ ಹಾಡು ಪ್ರಯತ್ನದಲ್ಲೇ ಐವತ್ತರ ದಶಕದ ಜನಪ್ರಿಯ ಗಾಯಕ ಘಂಟಸಾಲ ಅವರೊಂದಿಗೆ ಹಾಡುವ ಅದೃಷ್ಟ ಅವರದಾಯ್ತು. ಸಂಗೀತ ಸಂಯೋಜಕ ಪೆಂಡ್ಯಾಲ. ಜಾನಕಮ್ಮನವರ ಮೊದಲ ಈ ಹಾಡು ಸಾಕಷ್ಟು ಜನಪ್ರಿಯವಾಯ್ತು. ಇಂದಿಗೂ ಅದು ಕ್ಲಾಸಿಕ್ ಹಾಡು. ಇದೇ ಸಿನಿಮಾಗೆ ಅವರು ಘಂಟಸಾಲ ಜೊತೆಗೆ ‘ಇದೇನಂಡಿ ಇದೇನಂಡಿ ಭಾಗ್ಯನಗರಮು’ ಡ್ಯೂಯೆಟ್ ಹಾಡಿದ್ದಾರೆ.
ಸಿನ್ಹಳ | ಸದೈ ವೇದನಾ | ಸಿನಿಮಾ: ಅಯಿಯೈ ಮುಳ್ಳಿಯಿ | ‘ಭಾಯ್ ಭಾಯ್’ ಹಿಂದಿ ಚಿತ್ರದ ಸಿನ್ಹಳ ಅವತರಣಿಕೆಯ ಸಿನಿಮಾದ ಐದು ಹಾಡುಗಳನ್ನು ಜಾನಕಮ್ಮ ಹಾಡಿದ್ದರು. ಮೂಲ ಹಿಂದಿ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ್ದರು.
(Information – Photo credit: S Janaki Net)
