ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಂಎಸ್‌ವಿ – ಕಣ್ಣದಾಸನ್

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಂಗೀತ ಸಂಯೋಜಕ ಎಂ.ಎಸ್‌.ವಿಶ್ವನಾಥನ್‌ ಮತ್ತು ತಮಿಳು ಕವಿ – ಚಿತ್ರಸಾಹಿತಿ ಕಣ್ಣದಾಸನ್‌ ಅವರ ಜನ್ಮದಿನವಿಂದು (ಜೂನ್‌ 24). ತಮಿಳು, ಮಲಯಾಳಂ, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯ 700ಕ್ಕೂ ಹೆಚ್ಚು ಚಿತ್ರಗಳಿಗೆ ಎಂ.ಎಸ್‌.ವಿಶ್ವನಾಥನ್ ಸಂಗೀತ ಸಂಯೋಜಿಸಿದ್ದಾರೆ. ಕೆಲವು ವರ್ಷ ವಿಶ್ವನಾಥನ್ ಅವರು ಟಿ.ಕೆ.ರಾಮಮೂರ್ತಿ ಜೊತೆಗೂಡಿ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದರು. ಕವಿ, ಕಾದಂಬರಿಕಾರ, ನಾಟಕಕಾರರಾಗಿಯೂ ಆಗಿದ್ದ ಕಣ್ಣದಾಸನ್‌ 4500ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದಾರೆ.

Share this post