ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮದನ್ ಮೋಹನ್ ನೆನಪು

ಗಾಯಕ ಮೊಹಮ್ಮದ್ ರಫಿ ಅವರೊಂದಿಗೆ ಸಂಗೀತ ಸಂಯೋಜಕ ಮದನ್ ಮೋಹನ್‌. ಹಿಂದಿ ಚಿತ್ರರಂಗದ ಜನಪ್ರಿಯ ಸಂಗೀತ ಸಂಯೋಜಕ ಮದನ್ ಮೋಹನ್ (25/06/1924 – 14/07/1975) ಅವರ ಜನ್ಮದಿನವಿಂದು. ಅವರು ಸ್ವತಂತ್ರ್ಯವಾಗಿ ಸಂಗೀತ ಸಂಯೋಜಿಸಿದ ಮೊದಲ ಸಿನಿಮಾ ‘ಆಂಖೇ’ (1950). 25 ವರ್ಷಗಳ ವೃತ್ತಿ ಬದುಕಿನಲ್ಲಿ 95 ಸಿನಿಮಾಗಳಿಗೆ (648 ಹಾಡುಗಳು) ಸಂಗೀತ ಸಂಯೋಜಿಸಿದ್ದಾರೆ. ‘ದಸ್ತಕ್‌’ (1970) ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ಸಂಯೋಜಕ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಶಹೀದ್, ಆನ್ಸೂ, ಮುನಿಮ್‌ಜೀ (1954) ಚಿತ್ರಗಳಲ್ಲಿ ನಟಿಸಿದ್ದಾರೆ. (Photo Courtesy: madanmohan.in)

Share this post