ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟಿ ಆರ್.ಟಿ.ರಮಾ – 72

ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟಿ ಆರ್.ಟಿ.ರಮಾ ಅವರಿಗೆ ಇಂದು (ಜೂನ್‌ 25) 72 ವರ್ಷ ತುಂಬಿತು. ರಂಗಭೂಮಿ ಮೂಲಕ ನಟನೆ ಆರಂಭಿಸಿದ ರಮಾ ನಟಿಸಿದ ಮೊದಲ ಸಿನಿಮಾ ‘ಗೌರಿ’ (1963). ಮೇರು ಹಾಸ್ಯನಟ ನರಸಿಂಹರಾಜು ಜೋಡಿಯಾಗಿ ಅವರ ಪಾತ್ರಗಳು ಜನಪ್ರಿಯವಾಗಿವೆ. 100ಕ್ಕೂ ಹೆಚ್ಚು ಸಿನಿಮಾಗಳು, ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ದೆಹಲಿ ನಾಟಕ ಶಾಲೆ (NSD, 1975) ಪದವೀಧರೆ. ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ವಿಭಾಗದಲ್ಲಿ ರಂಗಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ‘ಕನ್ನಡ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಧಾರಿಗಳು’ ವಿಷಯದ ಸಂಶೋಧನಾ ಪ್ರಬಂಧಕ್ಕೆ ರಮಾ ಪಿಎಚ್‌ಡಿ ಗೌರವಕ್ಕೆ ಪಾತ್ರರಾಗಿದ್ದಾರೆ. (ಫೋಟೊ ಕೃಪೆ: ಪರಮ್ ಗುಬ್ಬಿ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು