ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜಾನಿ ಲಿವರ್ – 64

ನಟನಾಗಿ ಗುರುತಿಸಿಕೊಳ್ಳುವ ಮುನ್ನ ಜಾನಿ ಲಿವರ್‌ ಸ್ಟ್ಯಾಂಟ್‌ಅಪ್‌ ಕಮೆಡಿಯನ್ ಆಗಿ ಜನಪ್ರಿಯತೆ ಗಳಿಸಿದ್ದರು. ಆ ಸಂದರ್ಭದ ಫೋಟೊ ಇದು. ಅವರ ಜನ್ಮನಾಮ ಜಾನ್‌ ಪ್ರಕಾಶ್ ರಾವ್‌ ಜಾನುಮಾಲ. ಜಾನಿ ತಂದೆ ಬಹುಕಾಲ ಮತ್ತು ಕೆಲ ವರ್ಷ ಜಾನಿ ಲಿವರ್‌ ಕೂಡ ಹಿಂದೂಸ್ತಾನ್ ಲಿವರ್‌ ಕಂಪನಿಯಲ್ಲಿ ಕೆಲಸ ಮಾಡಿದರು. ಅವರ ಮಿಮಿಕ್ರಿ ಕಲೆ ಶುರುವಾಗಿದ್ದೇ ಅಲ್ಲಿ. ಬದುಕು ನೀಡಿದ ಸಂಸ್ಥೆಯ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ಸ್ಟ್ಯಾಂಡ್‌ಅಪ್‌ ಕಾಮಿಡಿ ಶೋಗಳಲ್ಲಿ ಹೆಸರು ಮಾಡಿದ ಜಾನಿ ‘ದರ್ದ್‌ ಕಾ ರಿಶ್ತಾ’’(1982) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಅತಿ ಕಡಿಮೆ ಅವಧಿಯಲ್ಲಿ ಸಿನಿಪ್ರೇಮಿಗಳ ಮನಗೆದ್ದ ಅವರು ಸಾಲು, ಸಾಲು ಚಿತ್ರಗಳಲ್ಲಿ ನಟಿಸಿದರು. ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಹತ್ತಾರು ಟೀವಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಇಂದು (ಆಗಸ್ಟ್‌ 14) ಅವರ ಜನ್ಮದಿನ.

Share this post