ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಿತ್ತೂರು ಚೆನ್ನಮ್ಮ

ಬಿ.ಆರ್.ಪಂತುಲು ನಿರ್ಮಾಣ ಮತ್ತು ನಿರ್ದೇಶನದ ‘ಕಿತ್ತೂರು ಚೆನ್ಮಮ್ಮ’ (1961) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿ ಬಿ.ಸರೋಜಾದೇವಿ. ಬ್ರಿಟೀಷರಿಗೆ ಸೆಡ್ಡು ಹೊಡೆದು ಹೋರಾಡಿದ ನಾಡಿನ ದಿಟ್ಟ ರಾಣಿಯ ಕಥಾನಕ. ನಟಿ ಸರೋಜಾದೇವಿ ಅವರ ವೃತ್ತಿಬದುಕಿಗೆ ತಿರುವು ನೀಡಿದ ಮಹತ್ವದ ಪ್ರಯೋಗ. ಅತ್ಯುತ್ತಮ ಪ್ರಾದೇ‍ಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ ಗೌರವಕ್ಕೆ ಚಿತ್ರ ಪ್ರಾಪ್ತವಾಯ್ತು. ಜಿ.ವಿ.ಅಯ್ಯರ್ ರಚನೆಯ ಗೀತೆಗಳಿಗೆ ಟಿ.ಜಿ.ಲಿಂಗಪ್ಪ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಅಕ್ಕಮಹಾದೇವಿ ಅವರ ವಚನಗಳು ಬಳಕೆಯಾಗಿವೆ. ಡಾ.ರಾಜಕುಮಾರ್‌, ಎಂ.ವಿ.ರಾಜಮ್ಮ, ಲೀಲಾವತಿ, ಬಾಲಕೃಷ್ಣ, ಇತರೆ ತಾರಾಬಳಗದಲ್ಲಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು