‘ಬರ’ (1982) ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಎಂ.ಎಸ್.ಸತ್ಯು ಅವರು ಛಾಯಾಗ್ರಾಹಕ ಗುಲಾಮ್ ಮುಂತಕಾ ಅವರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ. ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರ ಕೃತಿಯನ್ನು ಆಧರಿಸಿ ತಯಾರಾದ ‘ಬರ’ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅನಂತನಾಗ್, ಸಿ.ಆರ್.ಸಿಂಹ, ಲವ್ಲೀನ್ ಮಧು ನಟಿಸಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ, ಅತ್ಯುತ್ತಮ ಸಿನಿಮಾ ರಾಜ್ಯಪ್ರಶಸ್ತಿ ಸಂದಿವೆ. ಅತ್ಯುತ್ತಮ ಸಿನಿಮಾ, ನಿರ್ದೇಶಕ ಮತ್ತು ನಟ (ಅನಂತನಾಗ್) ವಿಭಾಗದಲ್ಲಿ ಮೂರು ಫಿಲ್ಮ್‌ಫೇರ್ ಪುರಸ್ಕಾರಗಳಿಗೆ ಚಿತ್ರ ಪಾತ್ರವಾಗಿದೆ. ಈ ಸಿನಿಮಾ ‘ಸೂಖಾ’ ಶೀರ್ಷಿಕೆಯಡಿ ಹಿಂದಿಯಲ್ಲೂ ತಯಾರಾಗಿದೆ.

ಬರ – ಎಂ.ಎಸ್.ಸತ್ಯು
- ಕನ್ನಡ ಸಿನಿಮಾ
Share this post