‘ಸನಾದಿ ಅಪ್ಪಣ್ಣ’ (1977) ಸಿನಿಮಾ ಚಿತ್ರೀಕರಣ ಸಂದರ್ಭ. ಚಿತ್ರದ ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್, ನಟ ರಾಜಕುಮಾರ್, ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್, ನಿರ್ಮಾಪಕ ವಿಕ್ರಂ ಶ್ರೀನಿವಾಸ್, ಚಿತ್ರಸಾಹಿತಿ ಚಿ.ಉದಯಶಂಕರ್. ರೇವತಿ ಸ್ಟುಡಿಯೋದಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿದ ಶ್ರೀನಿವಾಸ್ ಮುಂದೆ ‘ವಿಕ್ರಂ’ ಸ್ಟುಡಿಯೋದಲ್ಲಿ ಎರಡು ದಶಕಗಳ ಕಾಲ ದುಡಿದರು. ‘ವಿಕ್ರಂ ಶ್ರೀನಿವಾಸ್’ ಎಂದೇ ಕರೆಸಿಕೊಳ್ಳುತ್ತಿದ್ದ ಅವರ ನಿರ್ಮಾಣದ ಮೊದಲ ಸಿನಿಮಾ ‘ಬಾಲನಾಗಮ್ಮ; (1966). ದೂರದ ಬೆಟ್ಟ, ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ… ಅವರ ನಿರ್ಮಾಣದ ಇತರೆ ಪ್ರಮುಖ ಚಿತ್ರಗಳು. ಇಂದು ವಿಕ್ರಂ ಶ್ರೀನಿವಾಸ್ (16/07/1933 – 15/09/2003) ಅವರ ಜನ್ಮದಿನ. (ಫೋಟೊ ಕೃಪೆ: ಮಲ್ಲಿಕಾರ್ಜುನ ಮೇಟಿ)

ವಿಕ್ರಂ ಶ್ರೀನಿವಾಸ್ ನೆನಪು
- ಕನ್ನಡ ಸಿನಿಮಾ
Share this post