ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ರಂಗನಾಯಕಿ’ ಸೆಟ್

ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ರಂಗನಾಯಕಿ’ (1981) ಚಿತ್ರಕ್ಕಾಗಿ ದಕ್ಷಿಣ ಭಾರತದ ಖ್ಯಾತ ಕಲಾನಿರ್ದೇಶಕ ಶೇಖರ್‌ ಅವರು ಕಂಠೀರವ ಸ್ಟುಡಿಯೋದಲ್ಲಿ ಹಾಕಿದ್ದ ನಾಟಕ ಕಂಪನಿ ಸೆಟ್‌ ಇದು. ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋ. ವೃತ್ತಿರಂಗಭೂಮಿ ಹಿನ್ನೆಲೆಯ ಕಥಾವಸ್ತು ‘ರಂಗನಾಯಕಿ’. ಕಾದಂಬರಿಕಾರ ಅಶ್ವತ್ಥ ಅವರ ಕೃತಿಯನ್ನು ಆಧರಿಸಿದ ಪ್ರಯೋಗ. ಈ ಚಿತ್ರದಲ್ಲಿ ನಿರ್ದೇಶಕ ಪುಟ್ಟಣ್ಣ ವೃತ್ತಿರಂಗಭೂಮಿ ಏಳು-ಬೀಳು, ಕಲಾವಿದರ ರಂಗಭೂಮಿ ಮತ್ತು ಸಿನಿಮಾ ನಂಟನ್ನು ತೆರೆಯ ಮೇಲೆ ಸಮರ್ಪಕವಾಗಿ ಕಟ್ಟಿಕೊಟ್ಟಿದ್ದರು.

ಇಂದು (ಮಾರ್ಚ್‌ 27) ವಿಶ್ವರಂಗಭೂಮಿ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು