ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬ್ಯಾಂಡಿಟ್‌ ಕ್ವೀನ್ – ಸೀಮಾ ಬಿಶ್ವಾಸ್

ಶೇಖರ್ ಕಪೂರ್‌ ಚಿತ್ರಕಥೆ ರಚಿಸಿ, ನಿರ್ಮಿಸಿ, ನಿರ್ದೇಶಿಸಿದ ‘ಬ್ಯಾಂಡಿಟ್ ಕ್ವೀನ್‌’ (1994) ಹಿಂದಿ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಸೀಮಾ ಬಿಶ್ವಾಸ್‌. ನಟ ನಿರ್ಮಲ್‌ ಪಾಂಡೆ ಮತ್ತಿತರರು ಫೋಟೊದಲ್ಲಿದ್ದಾರೆ. ಮಾಲಾ ಸಿನ್ಹಾ ಅವರ ‘ಇಂಡಿಯಾಸ್‌ ಬ್ಯಾಂಡಿಟ್ ಕ್ವೀನ್‌’ ಕೃತಿ ಆಧರಿಸಿ ತಯಾರಾದ ಸಿನಿಮಾ. ಪಾಕಿಸ್ತಾನದ ಖ್ಯಾತ ಸೂಫಿ ಗಾಯಕ, ಸಂಗೀತ ಸಂಯೋಜಕ ನುಸ್ರತ್ ಫತೇ ಅಲಿ ಖಾನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ‘ಬ್ಯಾಂಡಿಟ್ ಕ್ವೀನ್‌’ಗೆ  ಅತ್ಯುತ್ತಮ ಪ್ರಾದೇಶಿಕ ಭಾಷಾ (ಹಿಂದಿ) ಸಿನಿಮಾ, ಅತ್ಯುತ್ತಮ ನಟಿ (ಸೀಮಾ ಬಿಶ್ವಾಸ್‌) ಮತ್ತು ಅತ್ಯುತ್ತಮ ವಸ್ತ್ರವಿನ್ಯಾಸ (ಡಾಲಿ ಅಹ್ಲುವಾಲಿಯಾ) ಮೂರು ರಾಷ್ಟ್ರಪ್ರಶಸ್ತಿಗಳು ಸಂದಿವೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು