ಬಿಮಲ್ ರಾಯ್ ನಿರ್ದೇಶನದ ‘ಪರಿಣೀತಾ’ (1953) ಹಿಂದಿ ಚಿತ್ರದಲ್ಲಿ ಅಶೋಕ್ ಕುಮಾರ್ ಮತ್ತು ಮೀನಾಕುಮಾರಿ. ಖ್ಯಾತ ಬೆಂಗಾಲಿ ಲೇಖಕ ಶರತ್‌ಚಂದ್ರ ಚಟ್ಟೋಪಾಧ್ಯಾಯ (ಒಳ ಚಿತ್ರ) ಅವರ ಕೃತಿಯನ್ನು ಆಧರಿಸಿ ತಯಾರಾದ ಯಶಸ್ವೀ ಚಿತ್ರವಿದು. ಶರತ್‌ಚಂದ್ರ ಚಟ್ಟೋಪಾಧ್ಯಾಯ ಅವರ ಕೃತಿಗಳನ್ನು ಆಧರಿಸಿ ಭಾರತದ ವಿವಿಧ ಭಾಷೆಗಳಲ್ಲಿ ಸುಮಾರು ಐವತ್ತು ಸಿನಿಮಾಗಳು ತಯಾರಾಗಿವೆ. ಅವರ ಬಹುಜನಪ್ರಿಯ ‘ದೇವದಾಸ್’ ಕೃತಿ ವಿವಿಧ ಭಾಷೆಗಳಲ್ಲಿ ಹದಿನೈದಕ್ಕೂ ಹೆಚ್ಚು ಬಾರಿ ಬೆಳ್ಳಿತೆರೆಗೆ ಅಳವಡಿಸ್ಪಟ್ಟಿದೆ. ಇಂದು ಶರತ್‌ಚಂದ್ರರ (15/09/1876 – 16/01/1938) ಜನ್ಮದಿನ. (Photo Courtesy: Film History Pics)

ಪರಿಣೀತಾ – ಶರತ್‌ಚಂದ್ರ ಚಟ್ಟೋಪಾಧ್ಯಾಯ
- ಹಿಂದಿ ಸಿನಿಮಾ
Share this post