ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಾಧವಿ – 59

ವರನಟ ಡಾ.ರಾಜಕುಮಾರ್ ಜೊತೆ ನಟಿ ಮಾಧವಿ. ದಕ್ಷಿಣ ಭಾರತದ ಯಶಸ್ವೀ ನಾಯಕನಟಿಯರಲ್ಲೊಬ್ಬರು ಮಾಧವಿ. ಯಶಸ್ವೀ ತಮಿಳು ಸಿನಿಮಾ ‘ಅಪೂರ್ವ ರಾಗಂಗಳ್‌’ ತೆಲುಗು ಅವತರಣಿಕೆ ‘ತೂರ್ಪು ಪದಮರ’ (1976) ಚಿತ್ರದಲ್ಲಿನ ಪಾತ್ರ ಅವರ ನಟನಾ ಬದುಕಿಗೆ ದೊಡ್ಡ ತಿರುವಾಯ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಡಾ.ರಾಜ್‌ – ಮಾಧವಿ ಯಶಸ್ವೀ ಜೋಡಿ (ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ, ಅನುರಾಗ ಅರಳಿತು, ಶೃತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು). ದಕ್ಷಿಣ ಭಾರತ ಚಿತ್ರರಂಗಗಳ ಎರಡು ತಲೆಮಾರಿನ ಪ್ರಮುಖ ನಾಯಕನಟರು ಹಾಗೂ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿರುವ ಕೆಲವೇ ನಟಿಯರಲ್ಲೊಬ್ಬರು ಮಾದವಿ. ಇಂದು ಅವರ 59ನೇ ಹುಟ್ಟುಹಬ್ಬ.

Share this post