ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಶೋಲೆ’ ಸಿಪ್ಪಿ

ಹಿಂದಿ ಸಿನಿಮಾರಂಗದಲ್ಲಿ ದಾಖಲೆ ಬರೆದ ‘ಶೋಲೆ’ (1975) ಚಿತ್ರತಂಡ. ಇದು ಚಿತ್ರೀಕರಣಕ್ಕೂ ಮುನ್ನ ಸೆರೆಹಿಡಿದ ಫೋಟೊ. ಚಿತ್ರದ ನಿರ್ದೇಶಕ ರಮೇಶ್ ಸಿಪ್ಪಿ, ಡ್ಯಾನಿ ಡೆನ್‌ಝೋಂಗ್ಪಾ (‘ಗಬ್ಬರ್ ಸಿಂಗ್‌’ ಪಾತ್ರದ ಮೊದಲ ಆಯ್ಕೆ ಡ್ಯಾನಿ ಆಗಿದ್ದರು), ಧರ್ಮೇಂದ್ರ, ಹೇಮಾಮಾಲಿನಿ, ನಿರ್ಮಾಪಕ ಜಿ.ಪಿ.ಸಿಪ್ಪಿ, ಸಂಜೀವ್ ಕುಮಾರ್‌, ಜಯಾಬಾಧುರಿ, ಅಮಿತಾಭ್ ಬಚ್ಚನ್‌. ಹಿಂದಿ ಚಿತ್ರನಿರ್ಮಾಪಕ, ನಿರ್ದೇಶಕ ಗೋಪಾಲ್‌ದಾಸ್‌ ಪರಮಾನಂದ್‌ ಸಿಪಾಹಿಮಲಾನಿ ಅವರು ಹಿಂದಿ ಚಿತ್ರರಂಗದಲ್ಲಿ ಜಿ.ಪಿ.ಸಿಪ್ಪಿ ಎಂದೇ ಹೆಸರಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಜಿ.ಪಿ.ಸಿಪ್ಪಿ ಐದು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಂದು ಜಿ.ಪಿ.ಸಿಪ್ಪಿ (14/09/1914 – 25/12/2007) ಅವರ ಜನ್ಮದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು