ನಟ ಲೋಕನಾಥ್ ವಿದೇಶಿ ಪ್ರವಾಸ ಕೈಗೊಂಡಾಗ ನಟ ಡಾ.ರಾಜಕುಮಾರ್ ಅವರು ಶುಭಹಾರೈಸಿದ ಸಂದರ್ಭ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದ ಲೋಕನಾಥ್. ರಂಗಭೂಮಿ ಹಿನ್ನೆಲೆಯ ನಟ ವೈವಧ್ಯಮಯ ಪಾತ್ರಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲುಳಿದಿದ್ದಾರೆ. ಸುಮಾರು ಆರು ದಶಕದ ನಟನಾ ಬದುಕಿನಲ್ಲಿ ಲೋಕನಾಥ್ ನೂರಕ್ಕೂ ಹೆಚ್ಚು ನಾಟಕಗಳು ಹಾಗೂ ನಾಲ್ಕುನೂರಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ಕಿರುತೆರೆ ಸರಣಿಗಳಲ್ಲೂ ಅಭಿನಯಿಸಿದ್ದಾರೆ. ರಂಗಭೂಮಿಗೆ ನಾಟಕಗಳನ್ನು ನಿರ್ದೇಶಿಸಿದ್ದ ಅವರು ಕಿರುತೆರೆಗೆ ‘ಅನೀಶ್’, ‘ನಿರೀಕ್ಷೆ’ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಇಂದು ಲೋಕನಾಥ್ (14/08/1927 – 31/12/2018) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ರಾಜ್ – ಲೋಕನಾಥ್
- ಕನ್ನಡ ಸಿನಿಮಾ
Share this post