
ಸಿನಿಮಾ ಛಾಯಾಗ್ರಾಹಕ
ನನ್ನನ್ನು ಬಹುವಾಗಿ ಪ್ರಭಾವಿಸಿದ ಶ್ರೇಷ್ಠ ಛಾಯಾಗ್ರಹಣದ ಐದು ಸಿನಿಮಾಗಳು
ಕಾಗಜ್ ಕೆ ಫೂಲ್ (1959, ಹಿಂದಿ) – ಛಾಯಾಗ್ರಹಣ ವಿ.ಕೆ.ಮೂರ್ತಿ ಸಂತ ತುಕಾರಾಂ (1963, ಕನ್ನಡ) – ಛಾಯಾಗ್ರಾಹಣ ಡಿ.ವಿ.ರಾಜಾರಾಂ. ವಿಶೇಷವಾಗಿ ಈ ಚಿತ್ರದಲ್ಲಿನ ಹಾಡುಗಳ ಸಿನಿಮಾಟೋಗ್ರಫಿ ಗಮನಿಸಬಹುದು. ಉತ್ತಮ ಛಾಯಾಗ್ರಹಣದ ಮೂಲಕ ಗೀತಸಾಹಿತ್ಯದ ಅರ್ಥವನ್ನು ಹೇಗೆ ಎತ್ತರಿಸಬಹುದು ಎನ್ನುವುದಕ್ಕೆ ಶ್ರೇಷ್ಠ ಉದಾಹರಣೆ. ಗೈಡ್ (1965, ಹಿಂದಿ) – ಛಾಯಾಗ್ರಹಣ ಫಾಲಿ ಮಿಸ್ತ್ರಿ ಅಮ್ರಪಾಲಿ (1966, ಹಿಂದಿ) – ಛಾಯಾಗ್ರಾಹಣ ದ್ವಾರಕಾ ದಿವೇಚಾ ನೆಂಜಿಲ್ ಒರು ಆಲಯಂ (1962, ತಮಿಳು) – ಛಾಯಾಗ್ರಹಣ ವಿನ್ಸೆಂಟ್. ಈ ಸಿನಿಮಾ ‘ದಿಲ್ ಏಕ್ ಮಂದಿರ್’ ಶೀರ್ಷಿಕೆಯಡಿ ಹಿಂದಿಯಲ್ಲೂ ತಯಾರಾಯ್ತು. ಅಲ್ಲೂ ವಿನ್ಸೆಂಟ್ ಛಾಯಾಗ್ರಹಣ ಮಾಡಿದ್ದಾರೆ. ವಿನ್ಸೆಂಟ್ ಅವರ ಲೈಟಿಂಗ್ ಪರಿಣತಿ ನನ್ನನ್ನು ತುಂಬಾ ಪ್ರಭಾವಿಸಿದೆ.