ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಭಗವಾನ್ – 88

ನಂದಿಬೆಟ್ಟದಲ್ಲಿ ‘ರಾಜದುರ್ಗದ ರಹಸ್ಯ’ (1967) ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ಕಲಾವಿದರಾದ ಡಾ.ರಾಜಕುಮಾರ್ ಮತ್ತು ಭಾರತಿ ಅವರಿಗೆ ಎಸ್‌.ಕೆ.ಭಗವಾನ್‌ ನಿರ್ದೇಶನ ನೀಡುತ್ತಿದ್ದಾರೆ. ಎಸ್‌.ಕೆ.ಭಗವಾನ್‌ ಅವರು ಎ.ಸಿ.ನರಸಿಂಹಮೂರ್ತಿ ಅವರೊಡಗೂಡಿ ನಿರ್ದೇಶಿಸಿದ ಚಿತ್ರ ‘ರಾಜದುರ್ಗದ ರಹಸ್ಯ’. ಸದಭಿರುಚಿಯ ಯಶಸ್ವೀ ಸಿನಿಮಾಗಳ ನಿರ್ದೇಶಕದ್ವಯರಾದ ದೊರೈ – ಭಗವಾನ್‌ ಒಟ್ಟು 32 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಮಾಂಗಲ್ಯ ಬಂಧನ’ ಮತ್ತು ‘ಆಡುವ ಗೊಂಬೆ’ ಭಗವಾನ್ ಒಬ್ಬರೇ ನಿರ್ದೇಶಿಸಿದ ಚಿತ್ರಗಳು. ನಿರ್ದೇಶಕ ಭಗವಾನ್ ಇಂದು (ಜುಲೈ 5) 88ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post