ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಫೋಟೊ ಆಲ್ಬಂ ಹಸ್ತಾಂತರ

ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣ ಕ್ಷೇತ್ರದಲ್ಲಿ ಬೆಂಗಳೂರು ಗಾಂಧಿನಗರದ ‘ಪ್ರಗತಿ’ ಸ್ಟುಡಿಯೋ ಕೊಡುಗೆ ಮಹತ್ವದ್ದು. ‘ಪ್ರಗತಿ’ ಸಂಗ್ರಹದ ಐದು ಸಾವಿರ ಸ್ಥಿರಚಿತ್ರಗಳಿದ್ದ ಆಲ್ಬಂಗಳನ್ನು 80ರ ದಶಕದಲ್ಲಿ ವಾರ್ತಾ ಇಲಾಖೆಗೆ ಉಚಿತವಾಗಿ ನೀಡಿ ಚಲನಚಿತ್ರ ಭಂಡಾರ ಸ್ಥಾಪಿಸುವಂತೆ ಮನವಿಮಾಡಿಕೊಂಡ ಸಂದರ್ಭ. ಆಗ ವಾರ್ತಾ ಇಲಾಖೆ ಮುಖ್ಯಸ್ಥರಾಗಿದ್ದ ಕೃಷ್ಣಮೂರ್ತಿ, ಚಿತ್ರನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ, ‘ಪ್ರಗತಿ’ ಸ್ಟುಡಿಯೋದ ಅಶ್ವತ್ಥ ನಾರಾಯಣ ಮತ್ತು ನಾಗೇಶ್ ಬಾಬ ಫೋಟೊದಲ್ಲಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು