ಆರ್.ನಾಗೇಂದ್ರ ರಾವ್ ನಿರ್ದೇಶನದ ‘ಜಾತಕ ಫಲ’ (1953) ಚಿತ್ರದಲ್ಲಿ ಎಂ.ಎಸ್.ಸುಬ್ಬಣ್ಣ. ರಂಗಭೂಮಿ ಹಿನ್ನೆಲೆಯ ನಟ – ಮೇಕಪ್ ಕಲಾವಿದ ಸುಬ್ಬಣ್ಣನವರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ದಲ್ಲಾಳಿ’ ಚಿತ್ರದಲ್ಲಿ ಅವರು ನಾಯಕನಟ. ನಟ ಡಾ.ರಾಜಕುಮಾರ್ ಅವರ ಅತ್ಯಾಪ್ತರಾಗಿದ್ದ ಸುಬ್ಬಣ್ಣನವರು ರಾಜ್‌ರ 50 ಚಿತ್ರಗಳು ಸೇರಿದಂತೆ ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಗಳಿಗೆ ಮೇಕಪ್ ಕಲಾವಿದ, ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರನಿರ್ದೇಶಕ ಎಂ.ಎಸ್.ರಾಜಶೇಖರ್ ಮತ್ತು ಮೇಕಪ್ ಕಲಾವಿದ ಎಂ.ಎಸ್.ಕೇಶವ ಇವರ ಪುತ್ರರು. ಸುಬ್ಬಣ್ಣನವರು ಅಗಲಿದ (1970, ಜುಲೈ 22) ದಿನವಿದು.

ಜಾತಕಫಲ – ಸುಬ್ಬಣ್ಣ
- ಕನ್ನಡ ಸಿನಿಮಾ
Share this post