ಕನ್ನಡ ಚಿತ್ರರಂಗ ಕಂಡ ಸುರದ್ರೂಪಿ ಮತ್ತು ಯಶಸ್ವೀ ನಾಯಕನಟರೊಲ್ಲಬ್ಬರು ವಿಷ್ಣುವರ್ಧನ್. ವೈವಿಧ್ಯಮಯ ಪಾತ್ರಗಳು, ಉತ್ತಮ ನಟನೆಯಿಂದ ಪ್ರೀತಿ ಗಳಿಸಿದ ಅವರ ಸಿನಿಮಾಗಳ ಸಾಲು ವರ್ಣರಂಜಿತ. ‘ವಂಶವೃಕ್ಷ’ (1972) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ವಿಷ್ಣು ‘ನಾಗರ ಹಾವು’ ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಮುಂದೆ ಮೂರೂವರೆ ದಶಕಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ಅವರು ಕನ್ನಡ ಚಿತ್ರರಂಗದ ಮಹತ್ವದ ನಾಯಕನಟ. ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷಾ ಚಿತ್ರಗಳಲ್ಲೂ ನಟಿಸಿದ್ದಾರೆ. ಇಂದು ವಿಷ್ಣುವರ್ಧನ್ (18/09/1950 – 30/12/2009) ನಮ್ಮೊಂದಿಗೆ ಇದ್ದಿದ್ದರೆ 71ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ವಿಷ್ಣುವರ್ಧನ್ ನೆನಪು
- ಕನ್ನಡ ಸಿನಿಮಾ
Share this post