ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಾಲನಟಿ ಮೀನಾ

ಸಿನಿಮಾವೊಂದರಲ್ಲಿ ನಟಿ ಲಕ್ಷ್ಮಿ ಅವರೊಂದಿಗೆ ಬಾಲನಟಿಯಾಗಿ ಮೀನಾ. ಮೇರು ತಮಿಳು ನಟ ಶಿವಾಜಿ ಗಣೇಶನ್‌ ಅವರ ‘ನೆಂಜಂಗಳ್‌’ (1982) ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಮೀನಾ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಮುಂದೆ ‘ನವಯುಗಂ’ ತೆಲುಗು ಚಿತ್ರದೊಂದಿಗೆ ನಾಯಕಿಯಾದ ಅವರು ದಕ್ಷಿಣ ಭಾರತದಲ್ಲಿ ತೊಂಬತ್ತರ ದಶಕದ ಯಶಸ್ವೀ ನಾಯಕನಟಿ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಪ್ರಮುಖ ನಾಯಕನಟರೊಂದಿಗೆ ಅಭಿನಯಿಸಿದ್ದಾರೆ. ಪುಟ್ನಂಜ, ಮೊಮ್ಮಗ, ಸಿಂಹಾದ್ರಿಯ ಸಿಂಹ, ಸ್ವಾಮಿಮುತ್ತು, ಮಹಾಸಾಧ್ವಿ ಮಲ್ಲಮ್ಮ, ಮೈ ಆಟೋಗ್ರಾಫ್… ಅವರ ಕೆಲವು ಪ್ರಮುಖ ಕನ್ನಡ ಸಿನಿಮಾಗಳು. ಇಂದು (ಸೆ. 16) ಅವರ 45ನೇ ಹುಟ್ಟುಹಬ್ಬ.

Share this post