ಖ್ಯಾತ ಗಾಯಕ, ಪತಿ ಕಿಶೋರ್ ಕುಮಾರ್ ಮತ್ತು ಪುತ್ರ ಸುಮಿತ್ ಕುಮಾರ್ ಜೊತೆ ನಟಿ ಲೀನಾ ಚಂದಾವರ್ಕರ್. ಧಾರವಾಡ ಮೂಲದ ಲೀನಾ ‘ಮನ್ ಕಾ ಮೀತ್’ (1968) ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಮುಂದೆ 70ರ ದಶಕದ ಮುಂಚೂಣಿ ನಾಯಕನಟಿಯಲ್ಲೊಬ್ಬರಾಗಿ ಹೆಸರು ಮಾಡಿದ ಅವರು ಅಂದಿನ ಸ್ಟಾರ್ ಹೀರೋಗಳಿಗೆ ಜೋಡಿಯಾಗಿ ನಟಿಸಿದರು. ತಮ್ಮ 25ನೇ ವಯಸ್ಸಿನಲ್ಲಿ ಅವರು ಗೋವಾ ಮೂಲದ ಸಿದ್ಧಾರ್ಥ್ ಬಂಡೋದ್ಕರ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ಆಕಸ್ಮಿಕವೊಂದರಲ್ಲಿ ಅವರ ಪತಿ ಅಗಲಿದರು. ಕೆಲ ವರ್ಷಗಳ ನಂತರ ಗಾಯಕ ಕಿಶೋರ್ ಕುಮಾರ್ ಅವರನ್ನು ಲೀನಾ ವರಿಸಿದರು. ಇವರ ದಾಂಪತ್ಯಕ್ಕೆ ಜನಿಸಿದ ಸುಮಿತ್ ಕುಮಾರ್ ವೃತ್ತಿಪರ ಗಾಯಕ. ಇಂದು (ಆಗಸ್ಟ್ 29) ಲೀನಾ 71ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (Photo Courtesy: Film History Pics)

ಲೀನಾ ಚಂದಾವರ್ಕರ್ – 71
- ಹಿಂದಿ ಸಿನಿಮಾ
Share this post