ಅದೂರ್ಥಿ ಸುಬ್ಬರಾವ್ ನಿರ್ದೇಶನದ ‘ಸುಡಿಗುಂಡಲು’ (1968) ತೆಲುಗು ಚಿತ್ರದಲ್ಲಿ ತಂದೆ, ಮೇರು ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರೊಂದಿಗೆ ಪುಟ್ಟ ಪಾತ್ರದಲ್ಲಿ ಬಾಲನಟ ನಾಗಾರ್ಜುನ್. ‘ವಿಕ್ರಂ’ (1986) ತೆಲುಗು ಚಿತ್ರದೊಂದಿಗೆ ನಾಯಕನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ನಾಗಾರ್ಜುನ ನಟನೆಯ ಚಿತ್ರಗಳ ಸಂಖ್ಯೆ ನೂರು ದಾಟಿದೆ. ಈ ಪಟ್ಟಿಯಲ್ಲಿ ಕೆಲವು ಹಿಂದಿ, ತಮಿಳು ಚಿತ್ರಗಳೂ ಇವೆ. ಅನ್ನಮಯ್ಯ, ಶ್ರೀ ರಾಮದಾಸು, ರಾಜಣ್ಣ, ಶಿರಡಿ ಸಾಯಿ… ಜೀವನಚರಿತ್ರೆಯ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ‘ಅನ್ನಮಯ್ಯ’ ಚಿತ್ರದ ನಟನೆಗೆ ರಾಷ್ಟ್ರಪ್ರಶಸ್ತಿ (ವಿಶೇಷ ಮನ್ನಣೆ) ಪಡೆದಿರುವ ನಾಗಾರ್ಜುನ ಒಂಬತ್ತು ನಂದಿ ಪ್ರಶಸ್ತಿ ಮತ್ತು ಮೂರು ಬಾರಿ ಫಿಲ್ಮ್‌ಫೇರ್ ಪುರಸ್ಕಾರ ಪಡೆದಿದ್ದಾರೆ. ಚಿತ್ರನಿರ್ಮಾಪಕರೂ ಹೌದು. ಇಂದು (ಆಗಸ್ಟ್ 29) ನಾಗಾರ್ಜುನ ಅವರ 62ನೇ ಹುಟ್ಟುಹಬ್ಬ.

ಬಾಲನಟ ನಾಗಾರ್ಜುನ
- ತೆಲುಗು ಸಿನಿಮಾ
Share this post