ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಂಡ್ಯ ರಮೇಶ್ – 57

‘ರಂಗಾಯಣ’ ಪ್ರದರ್ಶಿಸಿದ ಯೋಗಾನರಸಿಂಹ ನಿರ್ದೇಶನದ ‘ಶ್ರೀ ಕೃಷ್ಣಸಂಧಾನ’ ನಾಟಕದ (1990) ಅರ್ಜುನನ ಪಾತ್ರದಲ್ಲಿ ಮಂಡ್ಯ ರಮೇಶ್‌. ಕನ್ನಡ ರಂಗಭೂಮಿ, ಸಿನಿಮಾ, ಕಿರುತೆರೆಯ ಜನಪ್ರಿಯ ನಟ ಮಂಡ್ಯ ರಮೇಶ್‌. ‘ನೀನಾಸಂ’, ‘ರಂಗಾಯಣ’ ರಂಗಶಾಲೆಗಳಲ್ಲಿ ಕಲಿತ ರಮೇಶ್‌ ಹತ್ತಾರು ಪ್ರಮುಖ ನಾಟಕಗಳಲ್ಲಿ ಅಭಿನಯಿಸಿದರು. ವಿವಿಧ ರಂಗತಂಡಗಳಿಗೆ ನಾಟಕಗಳನ್ನು ನಿರ್ದೇಶಿಸಿ, ನಟಿಸಿದರು. ಮುಂದೆ ತಮ್ಮದೇ ‘ನಟನ’ ರಂಗಸಂಸ್ಥೆ ಕಟ್ಟಿದ ಅವರು ತಮ್ಮ ಸಂಸ್ಥೆಯ ಮೂಲಕ ರಂಗಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕ್ರಿಯಾಶೀಲ ಕಲಾವಿದ ಮಂಡ್ಯ ರಮೇಶ್‌ ಅವರಿಗೆ ಇಂದು (ಜುಲೈ 14) 57ನೇ ಹುಟ್ಟುಹಬ್ಬ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು