ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ, ಬಹುಭಾಷಾ ಕಲಾವಿದೆ ಜಯಂತಿ ಅಗಲಿದ್ದಾರೆ. ವೈವಿಧ್ಯಮಯ ಪಾತ್ರಗಳ ಮೂಲಕ ಸಿನಿಪ್ರೇಮಿಗಳ ಮನದಲ್ಲಿ ನೆಲೆಯಾಗಿರುವ ಜಯಂತಿ ಅವರ ಅಪರೂಪದ ಫೋಟೊಗಳು ಇಲ್ಲಿವೆ. ಅಗಲಿದ ಮೇರು ತಾರೆಗೆ ‘ಚಿತ್ರಪಥ’ದ ನಮನ.
‘ರಾಷ್ಟ್ರೀಯ ರಕ್ಷಣಾ ನಿಧಿ’ ಸಂಗ್ರಹಕ್ಕಾಗಿ ರಾಜ್ಯಪ್ರವಾಸ ಕೈಗೊಂಡಿದ್ದ ಸಂದರ್ಭ. ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಜಯಂತಿ ಮತ್ತು ಡಾ.ರಾಜಕುಮಾರ್ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ) ಜಯಂತಿ ಮತ್ತು ಕಲ್ಪನಾ (ಫೋಟೊ: ಭವಾನಿ ಲಕ್ಷ್ಮೀನಾರಾಯಣ) ‘ಸಂಶಯ ಫಲ’ ಸಿನಿಮಾ ಚಿತ್ರೀಕರಣ ಸಂದರ್ಭ. ಶ್ರೀನಾಥ್, ಮೇಕಪ್ ಕಲಾವಿದ ಎಂ.ಎಸ್.ಕೇಶವ, ತಮ್ಮ ಸಹಾಯಕಿ ರಾಜಮ್ಮ ಅವರೊಂದಿಗೆ ಜಯಂತಿ. ‘ಬಾಳು ಬೆಳಗಿತು’ ಚಿತ್ರದಲ್ಲಿ ಜಯಂತಿ, ರಾಜ್, ಭಾರತಿ ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರ್ದೇಶಕ ಗೀತಪ್ರಿಯ ಅವರೊಂದಿಗೆ (ಫೋಟೊ: ಭವಾನಿ ಲಕ್ಷ್ಮೀನಾರಾಯಣ) ‘ನಾಗರಹಾವು’ ಚಿತ್ರದ ಜನಪ್ರಿಯ ಒನಕೆ ಓಬವ್ವ ಪಾತ್ರದಲ್ಲಿ ‘ಕಿಲಾಡಿ ರಂಗ’ ಚಿತ್ರದಲ್ಲಿ ‘ತೀನ್ ಬಹುರಾಣಿಯಾ’ ಹಿಂದಿ ಚಿತ್ರದಲ್ಲಿ ಸಾವ್ಕಾರ್ ಜಾನಕಿ, ಕಾಂಚನಾ, ಜಯಂತಿ ಚಿತ್ರೀಕರಣವೊಂದರಲ್ಲಿ ನಟಕಲ್ಯಾಣ್ ಕುಮಾರ್ ಜೊತೆ (ಫೋಟೊ: ಭವಾನಿ ಲಕ್ಷ್ಮೀನಾರಾಯಣ) ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ನಟ ರಂಗಾ ಅವರೊಂದಿಗೆ ‘ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿ ಜಯಂತಿ, ಕಲ್ಪನಾ ನಟ ರಾಜೇಶ್ ಅವರೊಂದಿಗೆ ‘ಕುಲ ಗೌರವಂ’ ತೆಲುಗು ಚಿತ್ರದಲ್ಲಿ ಎನ್ಟಿಆರ್ ಜೋಡಿಯಾಗಿ ‘ಮಹಾ ಎಡಬಿಡಂಗಿ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿದ ಸಂದರ್ಭ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ) ‘ರೌಡಿ ರಂಗಣ್ಣ’ ಚಿತ್ರದಲ್ಲಿ ರಾಜ್, ಜಯಂತಿ ‘ಬಾಳು ಬೆಳಗಿತು’ ಚಿತ್ರದಲ್ಲಿ ರಾಜ್, ಜಯಂತಿ