ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಬೇಡರ ಕಣ್ಣಪ್ಪ

Share this post

`ಬೇಡರ ಕಣ್ಣಪ್ಪ’ (1954) ಚಿತ್ರದೊಂದಿಗೆ ರಾಜಕುಮಾರ್‌ ನಾಯಕನಟರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಗೊತ್ತಿರುವಂಥದ್ದೆ. ಈ ಪಾತ್ರಕ್ಕೆ ರಾಜ್‌ ಅವರಿಗೂ ಮುನ್ನ ವೃತ್ತಿರಂಗಭೂಮಿ ಕಲಾವಿದರಾದ ಎಸ್‌.ಆರ್‌.ರಾಜನ್‌ ಮತ್ತು ಎಲಿವಾಳ ಸಿದ್ದಯ್ಯಸ್ವಾಮಿ ಅವರ ಹೆಸರುಗಳು ಪ್ರಸ್ತಾಪವಾಗಿದ್ದವು. ಚಿತ್ರದ ಸಹನಿರ್ಮಾಪಕರಾದ ಗುಬ್ಬಿ ವೀರಣ್ಣ ಮತ್ತು ಎಚ್‌.ಎಲ್‌.ಎನ್‌.ಸಿಂಹ ಅವರ ಒತ್ತಾಸೆಯ ಮೇರೆಗೆ ಅಂತಿಮವಾಗಿ  ರಾಜಕುಮಾರ್ ಆಯ್ಕೆಯಾದರು.

ಮದರಾಸಿನ ಎವಿಎಂ ಸಂಸ್ಥೆಯ ಸಹಯೋಗದೊಂದಿಗೆ ಗುಬ್ಬಿ ವೀರಣ್ಣನವರು ನಿರ್ಮಿಸಿದ ಚಿತ್ರವಿದು. 1954ರ ಮೇ 7ರಂದು ರಾಜ್ಯದ 20 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿತು. ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಬೆಂಗಳೂರಿನ ‘ಸಾಗರ್‌’ ಮತ್ತು ಮೈಸೂರಿನ ‘ಅಪೇರಾ’ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿತು.

ಮುಂದೆ ಈ ಸಿನಿಮಾ ತೆಲುಗು (ಕಾಳಹಸ್ತಿ ಮಹಾತ್ಮ್ಯಂ), ತಮಿಳು (ವೇಡನ್ ಕಣ್ಣಪ್ಪ) ಮತ್ತು ಹಿಂದಿ (ಶಿವಭಕ್ತ್‌) ಭಾಷೆಗಳಲ್ಲೂ ತಯಾರಾಯ್ತು. ಮೂರೂ ಅವತರಣಿಕೆಗಳಿಗೆ ಎಚ್.ಎಲ್.ಎನ್.ಸಿಂಹ ನಿರ್ದೇಶಕರು. ತೆಲುಗು ಅವತರಣಿಕೆಯಲ್ಲಿ ರಾಜ್‌ ಅವರೇ ನಾಯಕನಾಗಿ ಅಭಿನಯಿಸಿದರು. ಮಾಲತಿ ನಾಯಕಿ. ಕನ್ನಡ ಸೇರಿದಂತೆ ಇತರೆ ಎರಡು ಅವತರಣಿಕೆಗಳಲ್ಲಿ ಫಂಡರೀಬಾಯಿ ನಾಯಕಿಯಾಗಿ ನಟಿಸಿದರು. ರಾಜಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ನಟಿಸಿದ ಏಕಮಾತ್ರ ಪರಭಾಷಾ ಚಿತ್ರವಾಗಿ ‘ಕಾಳಹಸ್ತಿ ಮಹಾತ್ಮ್ಯಂ’ (1955) ದಾಖಲಾಯಿತು. (ಮಾಹಿತಿ ಕೃಪೆ: ದೊಡ್ಡಹುಲ್ಲೂರು ರುಕ್ಕೋಜಿ ಅವರ ಡಾ.ರಾಜಕುಮಾರ್ ಸಮಗ್ರ ಚರಿತ್ರೆ)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

'ನಾವು ತುಂಬಾ ಒಳ್ಳೆಯವರು' ಟ್ರೇಲರ್‌ ಬಿಡುಗಡೆ | ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ

‘ನಾವು ತುಂಬಾ ಒಳ್ಳೆಯವರು’ ಟ್ರೇಲರ್‌ ಬಿಡುಗಡೆ | ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ

ಆಯುಷ್‌ ಮಲ್ಲಿ ನಿರ್ದೇಶನದಲ್ಲಿ ‘ನಾವು ತುಂಬಾ ಒಳ್ಳೆಯವರು’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಉತ್ತರ ಕರ್ನಾಟಕದ ಅಪ್ಪಟ ಜವಾರಿ ಸೊಗಡಿನ

ಮಂಡ್ಯದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ 'ರಾಶಿ' ಚಿತ್ರದ ಪ್ರಮೋಷನ್'ಗೆ ಚಾಲನೆ

ಮಂಡ್ಯದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ‘ರಾಶಿ’ ಚಿತ್ರದ ಪ್ರಮೋಷನ್’ಗೆ ಚಾಲನೆ

ಆದಿತ್ಯ ಶಶಿಕುಮಾರ್‌ ಮತ್ತು ಸಮೀಕ್ಷಾ ನಟಿಸಿರುವ ‘ರಾಶಿ’ ಚಿತ್ರದ ಪ್ರೊಮೋಷನ್‌ಗೆ ಚಾಲನೆ ಸಿಕ್ಕಿದೆ. ಅಖಿಲೇಶ್‌ ನಿರ್ಮಾಣದ ಈ ಚಿತ್ರವನ್ನು ವಿಜಯ್‌