ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವೈಶಾಲಿ ಕಾಸರವಳ್ಳಿ ನೆನಪು

ದಶಕಗಳ ಹಿಂದಿನ ಒಂದು ಅಪರೂಪದ ಫೋಟೋ. ಸಿನಿಮಾ ಸಂತೋಷಕೂಟವೊಂದರಲ್ಲಿ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ನಟಿ ವೈಶಾಲಿ ಕಾಸರವಳ್ಳಿ ದಂಪತಿ. ನಟಿ – ನಿರ್ದೇಶಕಿ – ವಸ್ತ್ರವಿನ್ಯಾಸಕಿ ವೈಶಾಲಿ ಕಾಸರವಳ್ಳಿ (12/04/1952 – 27/09/2010) ಅವರು ಇಂದು (ಏಪ್ರಿಲ್‌ 12) ನಮ್ಮೊಂದಿಗೆ ಇದ್ದಿದ್ದರೆ 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ‘ಮೂಡಲ ಮನೆ’ ಯಶಸ್ವೀ ಕಿರುತೆರೆ ಸರಣಿಯ ನಿರ್ದೇಶಕಿ ವೈಶಾಲಿಯವರು ‘ತಾಯಿ ಸಾಹೇಬ’ (1997) ಚಿತ್ರದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು