‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಬಿಡುಗಡೆ ಸಂದರ್ಭ. ಚಿತ್ರದ ಛಾಯಾಗ್ರಾಹಕ ಡಿ.ವಿ.ರಾಜಾರಾಂ, ನಟ ಲೋಕೇಶ್‌ರ ಹಿರಿಯ ಸಹೋದರಿ ಬಂಗಾರಮ್ಮ, ಲೋಕೇಶ್, ನಿರ್ಮಾಪಕ ವೀರಾಸ್ವಾಮಿ, ನಿರ್ದೇಶಕ ಸಿದ್ದಲಿಂಗಯ್ಯ ಇದ್ದಾರೆ. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ವಯ್ಯಾರಿ’ ಕಥಾಸಂಕಲನದಲ್ಲಿನ ಸಣ್ಣಕತೆಯನ್ನು ಆಧರಿಸಿ ತಯಾರಾದ ಪ್ರಯೋಗ. ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಇಂದು ನಟ ಲೋಕೇಶ್ (19/05/1947 – 14/10/2004) ಅವರ ಜನ್ಮದಿನ. (ಫೋಟೊ – ಪ್ರಗತಿ ಅಶ್ವತ್ಥ ನಾರಾಯಣ)
ನಟ ಲೋಕೇಶ್ ನೆನಪು
Share this post






