ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಿಷಿ ಕಪೂರ್ – ಧಾರಾ ಸಿಂಗ್ – ಅಂಬರೀಶ್

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್‌ಹಿಟ್‌ ‘ನಾಗರಹಾವು’ (1972) ಕನ್ನಡ ಸಿನಿಮಾ ‘ಜಹ್ರೀಲಾ ಇನ್ಸಾನ್‌’ (1974) ಶೀರ್ಷಿಕೆಯಡಿ ಹಿಂದಿಯಲ್ಲಿ ರೀಮೇಕ್ ಆಗಿತ್ತು. ಪುಟ್ಟಣ್ಣನವರ ನಿರ್ದೇಶನದಲ್ಲೇ ತಯಾರಾದ ಚಿತ್ರದಲ್ಲಿ ರಿಷಿ ಕಪೂರ್‌, ಮೌಸಮಿ ಚಟರ್ಜಿ ಮತ್ತು ನೀತೂ ಸಿಂಗ್ ಮುಖ್ಯಭೂಮಿಕೆಯ ತಾರೆಯರು. ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿತ್ತು. ಪೈಲ್ವಾನ್ ಪಾತ್ರದಲ್ಲಿ ಧಾರಾ ಸಿಂಗ್‌ ನಟಿಸಿದ್ದರೆ ‘ಜಲೀಲ’ನ ಪಾತ್ರದಲ್ಲಿ ಅಂಬರೀಶ್ ಅವರೇ ಇದ್ದರು. ಹಿಂದಿ ಚಿತ್ರರಂಗ ಕಂಡ ಯಶಸ್ವೀ ನಾಯಕನಟ ರಿಷಿ ಕಪೂರ್‌ (04/09/1952 – 30/04/2020) ಅಗಲಿದ ದಿನವಿದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು