ಕಂಠೀರವ ಸ್ಟುಡಿಯೋದಲ್ಲಿ ‘ಗುರುಶಿಷ್ಯರು’ (1981) ಸಿನಿಮಾ ಚಿತ್ರೀಕರಣದ ಸಂದರ್ಭ. ಶೂಟಿಂಗ್ ಸೆಟ್‌ಗೆ ಬಂದಿದ್ದ ಖ್ಯಾತ ಹಿಂದಿ ನಟ ದಿಲೀಪ್ ಕುಮಾರ್ ಅವರೊಂದಿಗೆ ನಿರ್ದೇಶಕ ಭಾರ್ಗವ, ನಟ – ನಿರ್ಮಾಪಕ ದ್ವಾರಕೀಶ್, ಛಾಯಾಗ್ರಾಹಕ ಡಿ.ವಿ.ರಾಜಾರಾಂ ಮತ್ತಿತರರು. ಬಂಗಾರದ ಮನುಷ್ಯ, ಶರಪಂಜರ, ಬೂತಯ್ಯನ ಮಗ ಅಯ್ಯು, ದೂರದ ಬೆಟ್ಟ, ಗಂಧದ ಗುಡಿ, ಮುತ್ತಿನ ಹಾರ, ಬಂಧನ… ಕನ್ನಡ ಚಿತ್ರರಂಗದ ಮೈಲುಗಲ್ಲಾದ ಹತ್ತಾರು ಸಿನಿಮಾಗಳ ಛಾಯಾಗ್ರಾಹಕ ಡಿ.ವಿ.ರಾಜಾರಾಂ. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಜಾರಾಂ ಮೂರು ಬಾರಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಚಿತ್ರರಂಗ ಕಂಡ ಮತ್ತೊಬ್ಬ ಮೇರು ಛಾಯಾಗ್ರಾಹಕ ಬಿ.ಎಸ್.ಬಸವರಾಜು ಇವರ ಪಟ್ಟ ಶಿಷ್ಯರಲ್ಲೊಬ್ಬರು. ಇಂದು ಡಿ.ವಿ.ರಾಜಾರಾಂ (18/08/1930 – 24/11/1982) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಗುರುಶಿಷ್ಯರು – ಡಿ.ವಿ.ರಾಜಾರಾಂ
- ಕನ್ನಡ ಸಿನಿಮಾ
Share this post