ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗುಲ್ಜಾರ್ – 87

ಪುತ್ರಿ ಮೇಘನಾ ಜೊತೆ ಗುಲ್ಜಾರ್‌ – ರಾಖಿ ದಂಪತಿ. ಹಿಂದಿ ಸಿನಿಮಾ ಬರಹಕ್ಕೆ ಕಾವ್ಯಾತ್ಮಕ ಗುಣ ತಂದುಕೊಟ್ಟ ಚಿತ್ರಸಾಹಿತಿಗಳಲ್ಲೊಬ್ಬರು ಗುಲ್ಜಾರ್‌. ಶ್ರೇಷ್ಠ ಸಿನಿಮಾಗಳ ನಿರ್ದೇಶಕರೂ ಹೌದು. ‘ಬಂದಿನಿ’ (1963) ಚಿತ್ರದ ಹಾಡುಗಳ ರಚನೆಯೊಂದಿಗೆ ಶುರುವಾದ ಅವರ ಸಿನಿಮಾ ನಂಟು ಇಂದಿಗೂ ಜಾರಿಯಲ್ಲಿದೆ. ಗೀತರಚನೆ, ಸಂಭಾಷಣೆ, ಚಿತ್ರಕಥೆ, ಚಿತ್ರನಿರ್ದೇಶನ ವಿಭಾಗದಲ್ಲಿ ಅವರದ್ದು ಮೇರು ಸಾಧನೆ. ಉರ್ದು ಮತ್ತು ಪಂಜಾಬಿ ಸಾಹಿತ್ಯದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲೂ ಅವರ ಹೆಜ್ಜೆ ಗುರುತು ಇದೆ. ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಗೌರವಗಳಿಂದ ಪುರಸ್ಕೃತಗೊಂಡಿದ್ದಾರೆ. ಇಂದು (ಆಗಸ್ಟ್‌ 18) ಗುಲ್ಜಾರ್‌ ಅವರ 87ನೇ ಹುಟ್ಟುಹಬ್ಬ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು