ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿ.ಜಯಶ್ರೀ – 71

‘ನಾಗಮಂಡಲ’ (1989) ನಾಟಕದಲ್ಲಿ ಅಕ್ಷತಾ ರಾವ್‌, ಶಂಕರ್‌ನಾಗ್‌, ಬಿ.ಜಯಶ್ರೀ ಮತ್ತು ರಮೇಶ್ ಭಟ್‌. ‘ಸಂಕೇತ್‌’ ತಂಡದ ಈ ನಾಟಕ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಠ ಪ್ರಯೋಗ. ಚಿತ್ರಕಲಾ ಪರಿಷತ್‌ನಲ್ಲಿ ಆರಂಭದ ಪ್ರದರ್ಶನಗಳು ನಡೆದಿದ್ದವು. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಗಾದಿಯ (ಹಾಸಿಗೆ) ವ್ಯವಸ್ಥೆ. ಪ್ರೇಕ್ಷಕರ ಸುತ್ತ ರಂಗಸಜ್ಜಿಕೆ. ಗಿರೀಶ್ ಕಾರ್ನಾಡ್‌ ರಚನೆ, ಶಂಕರ್‌ನಾಗ್ ನಿರ್ದೇಶನದ ನಾಟಕಕ್ಕೆ ಗೋಪಾಲ ವಾಜಪೇಯಿ ಗೀತೆಗಳನ್ನು ರಚಿಸಿದ್ದರು. ಸಂಗೀತ ಸಂಯೋಜನೆ ಸಿ.ಅಶ್ವಥ್‌ ಅವರದು. ಮುಂದೆ ಈ ನಾಟಕ ನಾಗಾಭರಣ ಅವರ ನಿರ್ದೇಶನದಲ್ಲಿ ಸಿನಿಮಾ (1997) ಆಯ್ತು. ರಂಗಭೂಮಿ ಮತ್ತು ಸಿನಿಮಾ ನಟಿ, ಗಾಯಕಿ ಬಿ.ಜಯಶ್ರೀ ಅವರ 71ನೇ ಜನ್ಮದಿನವಿಂದು (ಜೂನ್‌ 9). (Photo Courtesy: vktkv)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು