ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಪ್ರಹ್ಲಾದ’ನ ಪಾತ್ರಕ್ಕೆ ಮಾಸ್ತಿಯವರಿಂದ 10 ರೂ.ಬಹುಮಾನ!

Share this post

ಹಿರಿಯ ನಟ ಉಮೇಶ್ ಮೂಲತಃ ರಂಗಭೂಮಿ ಕಲಾವಿದರು. ನಾಲ್ಕೈದು ವರ್ಷದ ಪುಟಾಣಿಯಾಗಿದ್ದಾಗಲೇ ಅವರು ನಾಟಕಗಳಿಗೆ ಬಣ್ಣ ಹಚ್ಚಿದ್ದರು. ಗುಬ್ಬಿ ಕಂಪನಿಯಲ್ಲಿ ಬಾಲನಟನಾಗಿ ನಟಿಸಲು ಆರಂಭಿಸಿದ ಅವರು ನಂತರ ಮತ್ತೆ ಕೆಲವು ಕಂಪನಿಗಳಲ್ಲಿ ನಟಿಸಿದರು. ಹಾಗೆ ನೋಡಿದರೆ ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು ಕೂಡ ಬಾಲನಟನಾಗಿಯೇ. ಬಿ.ಆರ್.ಪಂತುಲು ಅವರ ‘ಮಕ್ಕಳ ರಾಜ್ಯ’ ಚಿತ್ರದೊಂದಿಗೆ ಅವರ ಸಿನಿಮಾ ನಂಟು ಶುರುವಾಯ್ತು.

ಗುಬ್ಬಿ ಕಂಪನಿಯ ‘ದಶಾವತಾರ’ ನಾಟಕದಲ್ಲಿ ಉಮೇಶ್ ಅವರು ನಟಿಸುತ್ತಿದ್ದ ಪ್ರಹ್ಲಾದನ ಪಾತ್ರ ಜನಪ್ರಿಯವಾಗಿತ್ತು. ರಂಗದ ಮೇಲೆ ಅವರ ಚಟುವಟಿಕೆಯ ಅಭಿನಯವನ್ನು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಿದ್ದರಂತೆ. “‘ಬಿ.ಪುಟ್ಟಸ್ವಾಮಯ್ಯನವರು ರಚಿಸಿ – ನಿರ್ದೇಶಿಸಿದ್ದ ಈ ನಾಟಕದ ಪ್ರಹ್ಲಾದನ ಪಾತ್ರವನ್ನು ಜನರು ತುಂಬಾ ಮೆಚ್ಚಿದ್ದರು. ಬೆಂಗಳೂರು ಗಾಂಧಿನಗರದಲ್ಲಿ ಪ್ರದರ್ಶನ ನಡೆಯುವಾಗ ಒಮ್ಮೆ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಬಂದಿದ್ದರು. ನನ್ನ ಪಾತ್ರ ಮೆಚ್ಚಿ ನಾಟಕ ಮುಗಿದ ನಂತರ ನನ್ನ ಬೆನ್ನು ತಟ್ಟಿ ಹತ್ತು ರೂಪಾಯಿ ಬಹುಮಾನ ಕೊಟ್ಟಿದ್ದರು!” ಎಂದು ಸ್ಮರಿಸುತ್ತಾರೆ ಉಮೇಶ್‌.

ಹಿರಣ್ಣಯ್ಯ ಮಿತ್ರ ಮಂಡಳಿಯ ಕೆಲವು ನಾಟಕಗಳಲ್ಲಿ ಉಮೇಶ್ ಬಾಲನಟನಾಗಿ ಅಭಿನಯಿಸಿದ್ದರು. ಅ.ನ.ಕೃಷ್ಣರಾಯರು ರಚಿಸಿದ್ದ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಿಜ್ಜಳ ಮಹಾರಾಜನಾಗಿ ಉಮೇಶ್ ನಟಿಸುತ್ತಿದ್ದರಂತೆ. ಇದೇ ಕಂಪನಿಯ ‘ಸತಿ ಅನಸೂಯ’ ನಾಟಕದಲ್ಲಿ ಕಾಣಿಸಿಕೊಂಡಾಗ ಅವರಿಗೆ ನಾಲ್ಕು ವರ್ಷವಷ್ಟೆ. 1949ರಿಂದ 1960ರವರೆಗೆ ಉಮೇಶ್‌ ವಿವಿಧ ನಾಟಕ ಕಂಪನಿಗಳಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಮಣಿ ಚರಿತ್ರೆ, ಕೃಷ್ಣಲೀಲೆ, ಅಕ್ಕಮಹಾದೇವಿ.. ಇನ್ನೂ ಕೆಲವು ಪ್ರಮುಖ ನಾಟಕಗಳು. “ಗುಬ್ಬಿ ಕಂಪನಿಯಲ್ಲೇ ನನ್ನ ಅಕ್ಷರಾಭ್ಯಾಸ ಆಯ್ತು. ರಂಗಭೂಮಿಯೇ ನಮಗೆ ವಿಶ್ವವಿದ್ಯಾಲಯ. ನಟನೆ, ಸಂಗೀತ, ಸಾಹಿತ್ಯ, ಹಾರ್ಮೋನಿಯಂ ಕಲಿತಿದ್ದೆಲ್ಲವೂ ಅಲ್ಲಿಯೇ. 1960ರ ನಂತರ ನಿಧಾನವಾಗಿ ಸಿನಿಮಾ ಕಡೆ ಹೊರಳಿದೆ. ಇಂದಿಗೆ ಬಣ್ಣ ಹಚ್ಚಿ ಏಳು ದಶಕಗಳೇ ಆಗಿಹೋದವು” ಎನ್ನುತ್ತಾರೆ ಉಮೇಶ್‌.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ