1923ರ ಇದೇ ದಿನ (ಜುಲೈ 13) ಅಮೆರಿಕದ ಲಾಸ್ ಏಂಜಲೀಸ್‌ನ ಮೌಂಟ್ ಲೀ ಬೆಟ್ಟದ ಮೇಲೆ ‘HOLLYWOODLAND’ ಬರಹ ಸ್ಥಾಪಿಸಲಾಗಿತ್ತು. ಪ್ರತಿ ಅಕ್ಷರಗಳು 30 ಅಡಿ ಅಗಲ, 50 ಅಡಿ ಎತ್ತರದವು. ಸುಮಾರು ನಾಲ್ಕು ಸಾವಿರ ಲೈಟ್‌ಗಳನ್ನು ಈ ಅಕ್ಷರಗಳಿಗೆ ಅಳವಡಿಸಲಾಗಿತ್ತು. ಮೊದಲು ರಿಯಲ್ ಎಸ್ಟೇಟ್ ಜಾಹೀರಾತಿಗಾಗಿ ಅಳವಡಿಸಲಾಗಿದ್ದ ಬರಹವಿದು. ಮುಂದೆ ಸಿನಿಮಾ ಚಟುವಟಿಕೆಗಳು ಹೆಚ್ಚಾಗಿ ಇದು ಸಿನಿಮಾ ಕೇಂದ್ರವಾಗಿ ಗುರುತಿಸಿಕೊಂಡಿತು. 1949ರಲ್ಲಿ ‘HOLLYWOOD’ ಎಂದು ಮರುನಾಮಕರಣಗೊಂಡಿತು. (ಫೋಟೊ – ಟಿಪ್ಪಣಿ: ವೆಂಕಟೇಶ್ ನಾರಾಯಣಸ್ವಾಮಿ)

ಹಾಲಿವುಡ್
- ಜಾಗತಿಕ ಸಿನಿಮಾ
Share this post