ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಮಲ್‌ ಬೆಳ್ಳಿತೆರೆ ನಂಟಿಗೆ 61

ಕಮಲ ಹಾಸನ್‌ ಬಾಲನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ‘ಕಳತ್ತೂರ್ ಕಣ್ಣಮ್ಮ’ ತಮಿಳು ಸಿನಿಮಾ ತೆರೆಕಂಡು ಇಂದಿಗೆ (ಆಗಸ್ಟ್‌ 12) 61 ವರ್ಷ. ಈ ಚಿತ್ರದ ಉತ್ತಮ ನಟನೆಗಾಗಿ ಕಮಲ ಹಾಸನ್‌ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಆರು ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡ ಅವರು ಮುಂದೆ ನಾಯಕನಟನಾಗಿ ದೊಡ್ಡ ಯಶಸ್ಸು ಕಂಡರು. ಬಹುಭಾಷಾ ನಟನಾಗಿ ಹೆಸರು ಮಾಡಿರುವ ಅವರು ಪ್ರಯೋಗಶೀಲ ನಿರ್ದೇಶಕರೂ ಹೌದು. ಪದ್ಮಭೂಷಣ ಪುರಸ್ಕೃತ ಕಮಲ ಹಾಸನ್‌ ಅತ್ಯುತ್ತಮ ನಟನೆಗಾಗಿ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. (ಫೋಟೊ – ಮಾಹಿತಿ: ವೆಂಕಟೇಶ್ ನಾರಾಯಣಸ್ವಾಮಿ)

Share this post