‘ಸ್ಕೂಲ್ ಮಾಸ್ಟರ್’ (1958) ಚಿತ್ರದಲ್ಲಿ ಬಿ.ಆರ್.ಪಂತುಲು. ಕನ್ನಡ ಚಿತ್ರರಂಗದ ಮೈಲುಗಲ್ಲುಗಳಲ್ಲೊಂದು ಎಂದು ಈ ಚಿತ್ರವನ್ನು ಗುರುತಿಸಿಲಾಗುತ್ತದೆ. ಬಿ.ಆರ್.ಪಂತುಲು ನಿರ್ಮಾಣ, ನಿರ್ದೇಶನದ ಈ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ತೆಲುಗು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಯ್ತು. 1959ರಲ್ಲಿ ಪಂತುಲು ಅವರೇ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸಿ, ನಿರ್ದೇಶಿಸಿ ನಟಿಸಿದರು. ಮುಂದಿನ ದಿನಗಳಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಮತ್ತೆ ರೀಮೇಕಾಗಿತ್ತು ವಿಶೇಷ. ಕನ್ನಡದ ಮೇರು ಚಿತ್ರನಿರ್ದೇಶಕ, ನಿರ್ಮಾಪಕ ಪಂತುಲು (26/07/1910 – 08/10/1974) ಅವರ ಸಂಸ್ಮರಣಾ ದಿನವಿದು.

ಸ್ಕೂಲ್ ಮಾಸ್ಟರ್
- ಕನ್ನಡ ಸಿನಿಮಾ
Share this post