ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೇಮಾವತಿ – ಪೋಸ್ಟ್‌ಮ್ಯಾನ್‌

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ (1977) ಚಿತ್ರದ ಒಂದು ದೃಶ್ಯ. ಇಲ್ಲಿ ಪೋಸ್ಟ್‌ ಮ್ಯಾನ್‌ ಪಾತ್ರದಲ್ಲಿರುವವರು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು. ಈ ಚಿತ್ರಕ್ಕೆ ಅವರು ಸ್ಥಿರಚಿತ್ರ ಛಾಯಾಗ್ರಾಹಣವನ್ನೂ ನಿರ್ವಹಿಸಿದ್ದರು. ಸಿನಿಮಾಗಳಲ್ಲಿನ ಇಂತಹ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಆ ಚಿತ್ರದಲ್ಲಿ ಕೆಲಸ ಮಾಡುವ ತಂತ್ರಜ್ಞರೇ ಕಾಣಿಸಿಕೊಳ್ಳುವುದು ಸಾಮಾನ್ಯ. ‘ನಿರ್ದೇಶಕ ಸಿದ್ದಲಿಂಗಯ್ಯನವರಿಗೆ ತಂತ್ರಜ್ಞರೆಂದರೆ ವಿಶೇಷ ಪ್ರೀತಿ. ಅವರು ತಮ್ಮ ಪ್ರತೀ ಸಿನಿಮಾಗಳ ಚಿಕ್ಕ ಪಾತ್ರಗಳಿಗೆ ತಂತ್ರಜ್ಞರಿಂದ ಬಣ್ಣ ಹಚ್ಚಿಸುತ್ತಿದ್ದರು’ ಎಂದು ಅಶ್ವತ್ಥರು ನೆನಪು ಮಾಡಿಕೊಳ್ಳುತ್ತಾರೆ. ಇಂದು (ಅಕ್ಟೋಬರ್ 9) ವಿಶ್ವ ಅಂಚೆ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು