ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸನಾದಿ ಅಪ್ಪಣ್ಣ – ವಿಜಯ್

ಊಟಿಯಲ್ಲಿ ‘ಸನಾದಿ ಅಪ್ಪಣ್ಣ’ (1977) ಸಿನಿಮಾ ಚಿತ್ರೀಕರಣದ ಸಂದರ್ಭ. ಛಾಯಾಗ್ರಾಹಕ ಡಿ.ವಿ.ರಾಜಾರಾಂ, ನಟ ರಾಜಕುಮಾರ್‌, ನಿರ್ಮಾಪಕ ವಿಕ್ರಂ ಶ್ರೀನಿವಾಸ್‌, ನಿರ್ದೇಶಕ ವಿಜಯ್‌, ಸಹ ಛಾಯಾಗ್ರಾಹಕ ಬಿ.ಎಸ್.ಬಸವರಾಜ್‌. ವಾಸ್ತವವಾಗಿ ‘ಸನಾದಿ ಅಪ್ಪಣ್ಣ’ ಛಾಯಾಗ್ರಹಕರು ಚಿಟ್ಟಿಬಾಬು. ಕಾರಣಾಂತರಗಳಿಂದ ಚಿತ್ರದ ಒಂದು ಹಾಡು ಮತ್ತು ಕೆಲವು ಸನ್ನಿವೇಶಗಳನ್ನು ಡಿ.ವಿ.ರಾಜಾರಾಂ ಅವರು ಚಿತ್ರಿಸಿಕೊಟ್ಟಿದ್ದರು. ವಿಜಯ್‌ ಹಿಟ್‌ ಚಿತ್ರಗಳ ನಿರ್ದೇಶಕರು. ಕನ್ನಡದ 37, ಹಿಂದಿಯ 16, ತೆಲುಗಿನ 12 ಚಿತ್ರಗಳನ್ನು ವಿಜಯ್ ನಿರ್ದೇಶಿಸಿದ್ದಾರೆ. ಕನ್ನಡದ ಮತ್ತೊಬ್ಬ ಸದಭಿರುಚಿ ನಿರ್ದೇಶಕ ವಿ.ಸೋಮಶೇಖರ್ ಅವರ ಜೊತೆಗೂಡಿ ಕೆಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ಇಂದು (ಜುಲೈ15) ವಿಜಯ್ (15/07/1936 –  09/09/2020) ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು