ಅದು 1972ರ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭ. ಗಡಿಯಲ್ಲಿ ಹೋರಾಟ ನಡೆಸುತ್ತಿದ್ದ ಸೈನಿಕರಿಗೆ ಕೈಲಾದ ಸಹಾಯ ಮಾಡಬೇಕೆಂದು ಕನ್ನಡ ಚಿತ್ರರಂಗ ನಿಶ್ಚಯಿಸಿತು. ಆಗ ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ರಾಜ್ಯಾದ್ಯಂತ ಸಂಚರಿಸಿ `ರಕ್ಷಣಾ ನಿಧಿ’ಗೆ ಹಣ ಸಂಗ್ರಹಿಸಿದರು. ನಾಡಿನ ಜನರಿಂದ ಕಲಾವಿದರ ಸ್ಪಂದನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ಯ ಪ್ರವಾಸದ ನಂತರ ಬೆಂಗಳೂರಿನ ಹೈಲ್ಯಾಂಡ್ ಹೋಟೆಲ್‌ನಲ್ಲಿ ಎಲ್ಲರೂ ಸೇರಿದ್ದರು. ಅಲ್ಲಿ ಸಂಗ್ರಹವಾದ ಹಣದ ಎಣಿಕೆ ಮಾಡಲಾಯ್ತು. ಈ ಸಂದರ್ಭದಲ್ಲಿ ನಾಣ್ಯಗಳ ಎಣಿಕೆಯಲ್ಲಿ ತೊಡಗಿರುವ ನಟಿ ಭಾರತಿ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಕ್ಯಾಮೆರಾದಲ್ಲಿ ಸೆರೆಯಾದದ್ದು ಹೀಗೆ.

ರಕ್ಷಣಾ ನಿಧಿ ಸಂಗ್ರಹ
- ಕನ್ನಡ ಸಿನಿಮಾ
Share this post