ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ದೇವಿಕಾರಾಣಿ – ಬಿ.ಸರೋಜಾದೇವಿ

ರಾಜ್ಯ ಸರ್ಕಾರ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿ ಸಹಯೋಗದೊಂದಿಗೆ ಕನ್ನಡ ಚಲನಚಿತ್ರ ಪತ್ರಕರ್ತರು 1977ರಲ್ಲಿ `ನಾಸ್ಟಾಲ್ಜಿಯಾ’ ಶೀರ್ಷಿಕೆಯಡಿ ವಿಶಿಷ್ಟ ಸಮಾರಂಭವೊಂದನ್ನು ಆಯೋಜಿಸಿದ್ದರು. ಹಿಂದಿ ಹಾಗೂ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ಹಿರಿಯರನ್ನು ನಾಡಿಗೆ ಆಹ್ವಾನಿಸಿ, ಸನ್ಮಾನ ಮಾಡುವುದು ಈ ಸಮಾರಂಭದ ಉದ್ದೇಶವಾಗಿತ್ತು. ಹಳೆಯ ಶ್ರೀಮಂತ ನೆನಪುಗಳನ್ನು ಮೆಲುಕು ಹಾಕುವ ಸಮಾರಂಭವಿದು. ಚಲನಚಿತ್ರ ಪತ್ರಕರ್ತರ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮಗಳು ನಡೆದಿದ್ದವು. ಆಗ ಹಿಂದಿ ತಾರೆ ದೇವಿಕಾ ರಾಣಿ ಅವರನ್ನು ನಟಿ ಬಿ.ಸರೋಜಾದೇವಿ ಅಭಿನಂದಿಸಿದ ಸಂದರ್ಭವಿದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post